ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್ , ಕಶ್ಯಪ್ ನಿರ್ಗಮನ

ಶುಕ್ರವಾರ, 26 ಸೆಪ್ಟಂಬರ್ 2014 (19:19 IST)
17ನೇ ಏಷ್ಯನ್ ಗೇಮ್ಸ್ ಬ್ಯಾಂಡ್ಮಿಂಟನ್ ಪುರುಷ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಸೋಲುವುದರೊಂದಿಗೆ ಭಾರತದ ಸವಾಲ್ ಅಂತ್ಯಗೊಳಿಸಿದ್ದಾರೆ.  
 
ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕಶ್ಯಪ್ ತಮ್ಮ ಚೀನಾ ಎದುರಾಳಿ ವಿಶ್ವದ ನಂಬರ್ ಒನ್ ಆಟಗಾರ ಲಿ ಚೊಂಗ್ ವೈ ವಿರುದ್ಧ 0-2 ಅಂತರದಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. 
 
ಮತ್ತೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್, ತಮ್ಮ ಚೀನಾದ ಎದುರಾಳಿ ಯಿಹಾನ್ ವಾಂಗ್ ವಿರುದ್ಧ   21-18 9-21 7-21 ಸೆಟ್‌ಗಳ ಅಂತರದಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.
 
ವಿಶ್ವದ ಆರನೇ ಶ್ರೇಯಾಂಕಿತ ಆಟಗಾರ್ತಿ ಸೈನಾ ಪಂದ್ಯದ ಆರಂಭದಲ್ಲಿ ಆಕ್ರಮಣಕಾರಿ ಹೋರಾಟ ನಡೆಸಿದರೂ ಎದುರಾಳಿ ಯಿಹಾನ್ ಜಾಣ್ಮೆಯ ಹೊಡೆತಗಳಿಗೆ ತಿರುಗೇಟು ನೀಡುವಲ್ಲಿ ವಿಫಲರಾದರು.  
 

ವೆಬ್ದುನಿಯಾವನ್ನು ಓದಿ