ಚೀನಾ ಓಪನ್ : ಸೈನಾ ನೆಹ್ವಾಲ್, ಕೆ.ಶ್ರೀಕಾಂತ್ ಫೈನಲ್‌‌ಗೆ ಲಗ್ಗೆ

ಶನಿವಾರ, 15 ನವೆಂಬರ್ 2014 (15:14 IST)
ಚೀನಾ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ಕೆ.ಶ್ರೀಕಾಂತ್ ಜಯಗಳಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. 
 
ಸೈನಾ ನೆಹ್ವಾಲ್, ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಚೀನಾದ ಎದುರಾಳಿ ಲಿವು ಜಿನ್ ವಿರುದ್ಧ 21-17 21-17 ಸೆಟ್‌ಗಳ ಅಂತರದಿಂದ ಜಯಗಳಿಸಿ ಫೈನಲ್‌ಗೆ ತಲುಪಿದ್ದಾರೆ.  
 
ವಿಶ್ವದ ಐದನೇ ಶ್ರೇಯಾಂಕಿತ ಆಟಗಾರ್ತಿ ಸೈನಾ, ಫೈನಲ್ ಪಂದ್ಯದಲ್ಲಿ ಕೊರಿಯಾದ ಬಾಯೆ ಯೆವೋನ್ ಜು ಅಥವಾ ಜಪಾನ್‌ನ ಅಕಾನೆ ಯಾಮಾಗುಚಿ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.
 
ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಜರ್ಮನಿಯ ಎದುರಾಳಿ ಮಾರ್ಕ್ ಜ್ವೈಬ್ಲೆರ್ 21-11 13-7 ಹಂತದಲ್ಲಿದ್ದಾಗ ನಿವೃತ್ತಿ ಘೋಷಿಸಿದ್ದರಿಂದ ಭಾರತೀಯ ಆಟಗಾರ ಶ್ರೀಕಾಂತ್ ಸುಲಭವಾಗಿ ಫೈನಲ್ ಪ್ರವೇಶಿಸಿದ್ದಾರೆ.
 
ಶ್ರೀಕಾಂತ್ ಫೈನಲ್ ಪಂದ್ಯದಲ್ಲಿ ಎರಡು ಬಾರಿ ಒಲಿಂಪಿಕ್ ಮತ್ತು ಐದು ಬಾರಿ ವಿಶ್ವಚಾಂಪಿಯನ್‌ರಾದ ಲಿನ್ ಡಾನ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ. 
 

ವೆಬ್ದುನಿಯಾವನ್ನು ಓದಿ