ರೋಮ್‌ ಮಾಸ್ಟರ್ಸ್‌ ಓಪನ್: ಸಾನಿಯಾ- ಹಿಂಗಿಸ್ ಜೋಡಿ ಅಂತಿಮ ಘಟ್ಟಕ್ಕೆ

ಭಾನುವಾರ, 17 ಮೇ 2015 (12:38 IST)
ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಇಲ್ಲಿ ನಡೆಯುತ್ತಿರುವ ರೋಮ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.
 
ಇದರೊಂದಿಗೆ ತಂಡಗಳ ಕ್ರಮಾಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
 
ಶನಿವಾರ ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್‌ ಹೋರಾಟದಲ್ಲಿ ಸಾನಿಯಾ ಮತ್ತು ಹಿಂಗಿಸ್‌ ಜೋಡಿ 6–2, 7–6ರ ನೇರ ಸೆಟ್‌ಗಳಿಂದ ಕರೋಲಿನ್‌ ಗಾರ್ಸಿಯಾ ಮತ್ತು ಕ್ಯಾಥರಿನಾ ಸ್ರೆಬೊಟ್ನಿಕ್‌ ಅವರನ್ನು ಪರಾಭವಗೊಳಿಸಿತು.
 
ಪ್ರಶಸ್ತಿ ಸುತ್ತಿನಲ್ಲಿ ಭಾರತ– ಸ್ವಿಸ್‌ ಜೋಡಿ ಮೂರನೇ ಶ್ರೇಯಾಂಕದ ಟೈಮಿ ಬಾಬೊಸ್‌ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಚ್‌ ಅವರ ಸವಾಲು ಎದುರಿಸಲಿದೆ.
 
ಇನ್ನೊಂದು ಸೆಮಿಫೈನಲ್‌ನಲ್ಲಿ ಟೈಮಿ ಮತ್ತು ಕ್ರಿಸ್ಟಿನಾ 6–2, 6–4ರಲ್ಲಿ ಅಲಾ ಕುದ್ರ್ಯಾವ್‌ತ್ಸೆವಾ ಮತ್ತು ಅನಸ್ತೇಸಿಯಾ ಪೆವಿಲ್ಯೂಚೆಂಕೋವಾ ಎದುರು ವಿಜಯಿಯಾದರು.
 

ವೆಬ್ದುನಿಯಾವನ್ನು ಓದಿ