ಯುಎಸ್ ಓಪನ್: ಸಾನಿಯಾ- ಸೋರಸ್ ಜೋಡಿಗೆ ಪ್ರಶಸ್ತಿಯ ಗರಿ

ಶನಿವಾರ, 6 ಸೆಪ್ಟಂಬರ್ 2014 (16:28 IST)
ಯುಎಸ್ ಓಪನ್ ಮಿಶ್ರ ಡಬಲ್ಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಖ್ಯಾತ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಬ್ರೆಜಿಲ್‌ನ ಬ್ರ್ಯೂನೋ ಸೋರಸ್ ಜೋಡಿ ತಮ್ಮ ಎದುರಾಳಿ ಅಮೆರಿಕನ್-ಮೆಕ್ಸಿಕೋ ಜೋಡಿಯಾದ ಅಬಿಗೈಲ್ ಸ್ಪೀಯರ್ಸ್ ಮತ್ತು ಸಾಂಟಿಯಾಗೋ ಗೋನ್ಜಾಲೆಜ್ ವಿರುದ್ಧ ಜಯಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  
 
ನಿನ್ನೆಯಷ್ಟೆ ಮಹಿಳಾ ಡಬಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದ ಸಾನಿಯಾ ಮಿರ್ಜಾ, ಮಿಶ್ರ ಡಬಲ್ಸ್‌ನಲ್ಲಿ ತಿರುಗೇಟು ನೀಡಿ ಮೂರನೇ ಬಾರಿಗೆ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.  
 
ಸಾನಿಯಾ- ಸೋರಸ್ ಜೋಡಿ ತಮ್ಮ ಎದುರಾಳಿ ಜೋಡಿಯ ವಿರುದ್ಧ  6-1, 2-6, 11-9 ಸೆಟ್‌ಗಳ ಅಂತರದಿಂದ ಜಯಗಳಿಸಿದ್ದಾರೆ.
 
27 ವರ್ಷ ವಯಸ್ಸಿನ ಸಾನಿಯಾ ಮಿರ್ಜಾ 2009ರಲ್ಲಿ ಆಸ್ಟ್ರೇಲಿಯಾ ಓಪನ್ ಮತ್ತು 2012ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಯುಎಸ್ ಓಪನ್ ಅವರ ಕಠಿಣ ಪರಿಶ್ರಮಕ್ಕೆ ಸಂದ ಗೌರವವಾಗಿದೆ.  
 

ವೆಬ್ದುನಿಯಾವನ್ನು ಓದಿ