ಯುಎಸ್ ಓಪನ್: ಸಾನಿಯಾ ಕಾರಾ ಜೋಡಿ ಸೆಮಿಫೈನಲ್‌ಗೆ

ಬುಧವಾರ, 3 ಸೆಪ್ಟಂಬರ್ 2014 (13:23 IST)
ಯುಎಸ್ ಓಪನ್ ಮಹಿಳಾ ಡಬಲ್ಸ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎದುರಾಳಿ ಜೋಡಿ ನಿವೃತ್ತಿ ಘೋಷಿಸಿದ್ದರಿಂದ ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ಜೊತೆಗಾರ್ತಿ ಕಾರಾ ಬ್ಲಾಕ್ ಸುಲಭವಾಗಿ ಸೆಮಿಫೈನಲ್ ಹಂತವನ್ನು ತಲುಪಿದ್ದಾರೆ.  
 
ಸಾನಿಯಾ ಮತ್ತು ಕಾರಾ ಜೋಡಿ, ತಮ್ಮ ಕಜಕಿಸ್ತಾನ್- ಚೀನಾ ಮೂಲದ ಜೋಡಿಯಾದ ಝರಿನಾ ದಿಯಾಸ್ ಮತ್ತು ಯಿ-ಫಾನ್ ಝು ಸೆಟ್‌ನಲ್ಲಿ 6-1 1-0 ಸ್ಕೋರ್‌ ಆಗಿದ್ದಾಗ ನಿವೃತ್ತಿ ಘೋಷಿಸಿದ್ದರಿಂದ ಮೂರನೇ ಶ್ರೇಯಾಂಕಿತ ಜೋಡಿ ಸಾನಿಯಾ ಮತ್ತು ಕಾರಾ ಸೆಮಿಫೈನಲ್ ಪ್ರವೇಶಿಸಿದ್ದಾರೆ.
 
ಸಾನಿಯಾ, ಕಾರಾ ಜೋಡಿ ಸೆಮಿಪೈನಲ್‌ನಲ್ಲಿ ಸ್ವಿಸ್- ಇಟಲಿ ಜೋಡಿಯಾದ ಮಾರ್ಟಿನ್ ಹಿಂಗಿಸ್ ಮತ್ತು ಫ್ಲಾವಿಯಾ ಪೆನ್ನಟ್ಟಾ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.
 
 ಮಾರ್ಟಿನ್ ಹಿಂಗಿಸ್ ಮತ್ತು ಫ್ಲಾವಿಯಾ ಪೆನ್ನಟ್ಟಾ ಜೋಡಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕ್ವೆಟಾ ಪೆಶ್ಕೆ ಮತ್ತು ಕಟಾರಿನಾ ಸ್ರೆಬೊಟ್ನಿಕ್ ಜೋಡಿ ವಿರುದ್ಧ  6-4 6-3 ಸೆಟ್‌ಗಳಿಂದ ಸೋಲಿಸಿ ಉಪಾಂತ್ಯಕ್ಕೆ ತಲುಪಿದ್ದಾರೆ.
 

ವೆಬ್ದುನಿಯಾವನ್ನು ಓದಿ