ಸಾನಿಯಾ- ಕಾರಾ ಬ್ಲಾಕ್ ಜೋಡಿ ಚಾಂಪಿಯನ್

ಭಾನುವಾರ, 26 ಅಕ್ಟೋಬರ್ 2014 (15:00 IST)
ಅಮೋಘ ಆಟದ ಪ್ರದರ್ಶನ ನೀಡಿದ ಸಾನಿಯಾ ಮಿರ್ಜಾ ಮತ್ತು ಕಾರಾ ಬ್ಲ್ಯಾಕ್‌ ಅವರು ಸೂಪರ್‌ ಟೈಬ್ರೇಕ್‌ನಲ್ಲಿ ಚೈನೀಸ್‌ ತೈಪೆಯ ಸು ವೈ ಹೀಹ್‌ ಮತ್ತು ಚೀನದ ಶುಯಿ ಪೆಂಗ್‌ ಅವರನ್ನು ಸೋಲಿಸಿ ಪ್ರಶಸ್ತಿ ಪಡೆದಿದ್ದಾರೆ.
 
ಸಾನಿಯಾ ಮಿರ್ಜಾ ಮತ್ತು ಕಾರಾ ಬ್ಲ್ಯಾಕ್‌ ಜೋಡಿ ತಮ್ಮ ಎದುರಾಳಿಯ ವಿರುದ್ಧ ಭರ್ಜರಿ ಆಟದ ಪ್ರದರ್ಶನ ನೀಡಿ ಜಯಗಳಿಸಿದ್ದಾರೆ.
 
ಫೈನಲ್ ಪಂದ್ಯದಲ್ಲಿ ಒಂದು ಹಂತದಲ್ಲಿ 6-9 ಅಂತರದಿಂದ ಹಿನ್ನಡೆಯಲ್ಲಿದ್ದ ಮೂರನೇ ಶ್ರೇಯಾಂಕದ ಸಾನಿಯಾ-ಬ್ಲ್ಯಾಕ್‌ ಅವರು 4-6, 7-5, 11-9 ಸೆಟ್‌ಗಳಿಂದ ಗೆಲುವು ಸಾಧಿಸಿ ಜಯಗಳಿಸಿದ್ದರು. 

ವೆಬ್ದುನಿಯಾವನ್ನು ಓದಿ