ದೇಶದ ಹೆಮ್ಮೆಯ ಪುತ್ರಿ ಸಾನಿಯಾ ಮಿರ್ಜಾಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರದಾನ

ಭಾನುವಾರ, 30 ಆಗಸ್ಟ್ 2015 (15:30 IST)
ದೇಶದ ಹೆಮ್ಮೆಯ ಪುತ್ರಿಯಾದ ಸಾನಿಯಾ ಮಿರ್ಜಾಗೆ ದೇಶದ ಅತ್ಯುನ್ನತ ಕ್ರೀಡಾಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
 
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಸಾನಿಯಾಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಸರ್ಬಾನಂದ್ ಸೋನೋವಾಲ್ ಉಪಸ್ಥಿತಿರಿದ್ದರು.  
 
ಖ್ಯಾತೆ ಟೆನಿಸ್ ಆಟಗಾರ ಲಿಯಾಂಡರ್ ಪೇಸ್‌ ನಂತರ ಖೇಲ್ ರತ್ನ ಪ್ರಶಸ್ತಿ ಪಡೆದ ಸಾನಿಯಾ ಎರಡನೇಯವರಾಗಿದ್ದಾರೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಕುರಿತಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಪ್ರಶಸ್ತಿ ವಿತರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
 
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕ್ರೀಡಾಪಟುಗಳಿಗೆ ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಿದರು, ಕ್ರಿಕೆಟಿಗ ರೋಹಿತ್ ಶರ್ಮಾ, ಬಾಕ್ಸರ್ ಮಂನದೀಪ್ ಜಾಂಗ್ರಾ ಮತ್ತು ಎಂ.ಆರ್,ಪೂವಮ್ಮ ಗೈರುಹಾಜರಾಗಿದ್ದರು.
 
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಚರಣೆಗೆ ಸಾನಿಯಾ ಮಿರ್ಜಾ ಹೆಸರು ಕರೆಯುತ್ತಿದ್ದಂತೆ ದರ್ಭಾರ್ ಭವನದಲ್ಲಿ ನೆರೆದಿದ್ದ ಗಮ್ಯರು ಚಪ್ಪಾಳೆ ತಟ್ಟಿ ಗೌರವಿಸಿದರು.
 

ವೆಬ್ದುನಿಯಾವನ್ನು ಓದಿ