ಶನಿವಾರ ನಡೆದ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಹೋರಾಟ ದಲ್ಲಿ ಸೋಮದೇವ್ 1–6, 6–4, 6–4ರಲ್ಲಿ ಇಟಲಿಯ ಲ್ಯೂಕಾ ವಾನ್ನಿ ಎದುರು ಜಯಭೇರಿ ಮೊಳಗಿಸಿದರು. ಈ ವರ್ಷದ ಆರಂಭದಲ್ಲಿ ನಡೆದ ದೆಹಲಿ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಆಟಗಾರ ಪ್ರಶಸ್ತಿ ಜಯಿಸಿ ದ್ದರು. ಆ ಬಳಿಕ ನಡೆದ ಹಲವು ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸಿದ್ದ ಅವರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು.
ದಿವಿಜ್ ಜೋಡಿಗೆ ಜಯ: ಪುರುಷರ ಡಬಲ್ಸ್ ವಿಭಾಗದ ಎರಡನೇ ಸೆಮಿಫೈನಲ್ನಲ್ಲಿ ಭಾರತದ ಯೂಕಿ ಭಾಂಬ್ರಿ ಮತ್ತು ದಿವಿಜ್ ಶರಣ್ 7–6, 7–6ರಲ್ಲಿ ಚೀನಾ ತೈಪೆಯ ತಿ ಚೆನ್ ಮತ್ತು ಹ್ಸೀನ್ ಯಿನ್ ಪೆಂಗ್ ಅವರನ್ನು ಪರಾಭವಗೊಳಿಸಿದರು. ಭಾನುವಾರ ನಡೆಯುವ ಫೈನಲ್ನಲ್ಲಿ ದಿವಿಜ್ ಹಾಗೂ ಯೂಕಿ ಭಾರತದವರೇ ಆದ ಸೋಮದೇವ್ ಹಾಗೂ ಸನಮ್ ಎದುರು ಸೆಣಸಲಿದ್ದಾರೆ.