ವಡೋದರ: ಡಬ್ಲ್ಯುಪಿಎಲ್ 2025ರ ಗುಜರಾತ್ ಜೈಂಟ್ಸ್ ವಿರುದ್ಧದ ಆರಂಭಿಕ ಪಂದ್ಯಾಟದಲ್ಲಿ ಹೊಸ ದಾಖಲೆಯೊಂದಿಗೆ ಜಯದ ಓಟ ಆರಂಭಿಸಿದ ಆರ್‌ಸಿಬಿ ಇಂದು ಎರಡನೇ ಪಂದ್ಯಾಟವನ್ನು ಎದುರಿಸಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ), ವಡೋದರದ ಕೊತಂಬಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಬೌಲಿಂಗ್ ಆಯ್ದುಕೊಂಡು, ಡಿಸಿಯನ್ನು ಬ್ಯಾಟಿಂಗ್‌ಗೆ ಸ್ವಾಗತಿಸಿದೆ.
ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ದಾಖಲೆ ಮೊತ್ತ ಬೆನ್ನತ್ತಿ ಗೆದ್ದಿರುವ ಆರ್‌ಸಿಬಿ ಇದೀಗ ಮತ್ತೇ ಗೆಲುವಿನ ನಿರೀಕ್ಷೆಯಲ್ಲಿ ಗ್ರೌಂಡ್‌ಗಿಳಿದಿದ್ದಾರೆ. ಮೊದಲ ಪಂದ್ಯಾಟದಲ್ಲೂ ಗುಜರಾತ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇಂದು ಕೂಡಾ ಟಾಸ್ ಗೆದ್ದು, ಹೊಸ ದಾಖಲೆಯನ್ನು ಮಾಡುತ್ತಾ ಕಾದು ನೋಡಬೇಕು.
ಡೆಲ್ಲಿ ಪಡೆ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದೆ. ಅನುಭವಿಗಳಾದ ಜೆಸ್ ಜಾನ್ಸನ್ ಮತ್ತು ಮರಿಜನ್ನೆ ಕೇಪ್ ತಂಡ್ಕೆ ವಾಪಸ್ ಆಗಿದ್ದಾರೆ