ಭಾರತದ ಹಾಕಿಗೆ ದೊಡ್ಡ ಆಘಾತ, ಕೋಚ್ ಟೆರಿ ವಾಲ್ಷ್ ರಾಜೀನಾಮೆ

ಮಂಗಳವಾರ, 21 ಅಕ್ಟೋಬರ್ 2014 (18:13 IST)
ಭಾರತಕ್ಕೆ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ತಂದುಕೊಟ್ಟ ಹಾಕಿ ಕೋಚ್ ರಾಜೀನಾಮೆ ನೀಡಿದ ಘಟನೆ ನಡೆದಿದೆ. ಹಾಕಿ ಕೋಚ್  ಟೆರಿ ವಾಲ್ಷ್  ಕ್ರೀಡಾ ಆಡಳಿತಮಂಡಳಿಯ ವ್ಯವಸ್ಥೆಯಿಂದ ಮತ್ತು ವೇತನದ ವಿವಾದದಿಂದ ಬೇಸತ್ತು ಹಠಾತ್ ರಾಜೀನಾಮೆ ನೀಡಿದ್ದಾಗಿ ಕಾರಣ ಹೇಳಿದ್ದಾರೆ.  2014ರ ಏಷ್ಯನ್ ಕ್ರೀಡಾಕೂಟದಲ್ಲಿ ಟೆರಿ ವಾಲ್ಷ್ ಭಾರತದ ಹಾಕಿ ತಂಡಕ್ಕೆ ಚಿನ್ನದ ಪದಕವನ್ನು ತಂದಿತ್ತಿದ್ದರು.

 ಈ ಕುರಿತು ಹಾಕಿ ಅಧ್ಯಕ್ಷ ನಾರಿಂದರ್ ಬಾತ್ರಾ ಈಮೇಲ್ ಕಳಿಸಿದ್ದಾರೆ.ಭಾರತದ ಕ್ರೀಡಾ ಆಡಳಿತ ಮಂಡಳಿಯ ನಿರ್ಧಾರ ಕೈಗೊಳ್ಳುವ ಶೈಲಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ.

ಸುದೀರ್ಘಾವಧಿಯಲ್ಲಿ ಭಾರತದ ಹಾಕಿ ಆಟಗಾರರ ಹಿತಾಸಕ್ತಿಗೆ ಇದು ವಿರುದ್ಧವಾಗಿದೆ ಎಂದು ಕ್ರೀಡಾ ಮಹಾನಿರ್ದೇಶಕ ಜಿಜಿ ಥಾಮ್ಸನ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ವಾಲ್ಷ್ ಅವರ ಗುತ್ತಿಗೆ ನವೆಂಬರ್ 19ಕ್ಕೆ ಮುಗಿಯಲಿದೆ. 2016ರ ರಿಯೋ ಒಲಿಂಪಿಕ್ಸ್‌ವರೆಗೆ ವಾಲ್ಷ್ ಗುತ್ತಿಗೆಯನ್ನು ವಿಸ್ತರಿಸಬೇಕೆಂದು ಬಾತ್ರಾ ಎಸ್‌ಎಐಗೆ ಒತ್ತಾಯಿಸಿದ್ದರು. ಆದರೆ ವಾಲ್ಷ್ ಹಠಾತ್ ರಾಜೀನಾಮೆ ನೀಡುವ ಮೂಲಕ ಭಾರತದ ಹಾಕಿ ಕೋಚ್‌ ಹುದ್ದೆಯಿಂದ ಮುಕ್ತಿಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ