ದೂಸ್ರಾ ಎಸೆತ ಇಲ್ಲದಿದ್ದರೆ ಕ್ರಿಕೆಟ್‌ಗೆ ದೊಡ್ಡ ನಷ್ಟ: ಮೊಯಿನ್ ಅಲಿ

ಗುರುವಾರ, 25 ಸೆಪ್ಟಂಬರ್ 2014 (19:53 IST)
ಪಾಕಿಸ್ತಾನದ ಆಫ್‌ಸ್ಪಿನ್ನರ್  ಸಯೀದ್ ಅಜ್ಮಲ್  ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿದ ಕ್ರಮ ವಿಶ್ವಾದ್ಯಂತ ಬೌಲರುಗಳಿಗೆ ವಿಶೇಷವಾಗಿ ದೂಸ್ರಾ ಬೌಲಿಂಗ್ ಮಾಡಲು ಇಚ್ಛಿಸುವ ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು  ಇಂಗ್ಲೆಂಡ್ ಆಲ್‌ರೌಂಡರ್  ಮೊಯಿನ್ ಅಲಿ ಹೇಳಿದರು.

ವೋರ್ಸೆಸ್ಟ್‌ಶೈರ್‌ನಲ್ಲಿ ಅಜ್ಮಲ್  ಜೊತೆ ಆಡಿದ್ದ ಅವರು ಶಂಕಿತ ಆಕ್ಷನ್‌ ಮಾಡುವ ಬೌಲರುಗಳ ಮೇಲೆ ಕ್ರಮದಿಂದ ತಾವೂ ಸೇರಿ ಉಳಿದ ಬೌಲರುಗಳು ದೂಸ್ರಾ ಬೌಲಿಂಗ್ ಮಾಡುವುದರಿಂದ ನಿರ್ಬಂಧಿಸುತ್ತದೆ ಎಂದು ನುಡಿದರು. ಆದರೆ ತಾವು ದೂಸ್ರಾ ಬೌಲಿಂಗ್ ಅಭ್ಯಾಸವನ್ನು ಕೈಬಿಡುವುದಿಲ್ಲ. ಆದರೆ ಪಂದ್ಯದಲ್ಲಿ ಈ ಪ್ರಯೋಗ ಕೈಬಿಟ್ಟು ಇತರೆ ಎಸೆತಗಳ ಮೇಲೆ ಗಮನಹರಿಸುತ್ತೇನೆ ಎಂದು ನುಡಿದರು.

ನಾನು ಇದನ್ನು ಈಗಲೂ ಅಭ್ಯಾಸ ಮಾಡುತ್ತಿದ್ದು, ಇದೊಂದು ಅದ್ಭುತ ಎಸೆತ. ಸಯೀದ್ ಅಜ್ಮಲ್ ದೂಸ್ರಾ ಎಸೆತದ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಮೂರ್ಖರನ್ನಾಗಿಸುವುದು ನೋಡುವುದು ಮನಮೋಹಕ ಎಂದು ನುಡಿದರು. ಆದರೆ ದೂಸ್ರಾ ಎಸೆತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಲ್ಲದಿದ್ದರೆ ಅದು ಆಟಕ್ಕೆ ದೊಡ್ಡ ನಷ್ಟ ಎಂದು ನುಡಿದರು. 

ವೆಬ್ದುನಿಯಾವನ್ನು ಓದಿ