ಸಾನಿಯಾ-ಕಾರಾ ಜೋಡಿಗೆ ಸಿಂಗಾಪುರ ಡಬ್ಲ್ಯುಟಿಎ ಪ್ರಶಸ್ತಿ

ಸೋಮವಾರ, 27 ಅಕ್ಟೋಬರ್ 2014 (09:34 IST)
ಸಿಂಗಾಪುರದಲ್ಲಿ ನಡೆದ ಡಬ್ಲ್ಯುಟಿಎ ಮಹಿಳಾ ಡಬಲ್ಸ್ ಟೆನ್ನಿಸ್ ಫೈನಲ್ ಪಂದ್ಯದಲ್ಲಿ ಸಾನಿಯಾ-ಮಿರ್ಜಾ ಮತ್ತು ಕ್ಲಾರಾ ಬ್ಲಾಕ್ ಜೋಡಿ ಭರ್ಜರಿ ಜಯ ದಾಖಲಿಸಿದ್ದಾರೆ. 

ಇದೇ ಮೊದಲ ಬಾರಿಗೆ ಡಬ್ಲ್ಯುಟಿಎ ಟೆನ್ನಿಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಈ ಜೋಡಿ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದಿದ್ದಾರೆ.ಚೀನಾದ ಸುವೈ ಹೆಯ್  ಮತ್ತು ಶುಯಿ ಪೆಂಗ್ ಜೋಡಿಯನ್ನು 6-1, 6-0 ನೇರ ಸೆಟ್‌ಗಳಿಂದ ಸೋಲಿಸಿದ  ಈ ಜೋಡಿ ಪ್ರಶಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿತು.
 
ಕೇವಲ ಒಂದು ಗಂಟೆಗಳ ಕಾಲ ನಡೆದ ಪಂದ್ಯ ಏಕಪಕ್ಷೀಯವಾಗಿತ್ತು. ಅಂತಿಮವಾಗಿ 3 ಸೆಟ್‌ಗಳ ಪೈಕಿ 2ರಲ್ಲಿ ಮೇಲುಗೈ ಸಾಧಿಸಿದ ಸಾನಿಯಾ ಜೋಡಿ ನಿರಾಯಾಸವಾಗಿ ವಿಜಯಿಯಾಯಿತು.
 
ಕಳೆದ ತಿಂಗಳು ನಡೆದ ಯುಎಸ್ ಓಪನ್ ಪಂದ್ಯಾವಳಿಯಲ್ಲಿಯೂ ಸಾನಿಯಾ ಮತ್ತು ಕಾರಾ ಬ್ಲಾಕ್ ಜೋಡಿ ಫೈನಲ್ ಪ್ರವೇಶಿಸಿತ್ತು.
 
''ಗೆಲುವಿನೊಂದಿಗೆ ನಮ್ಮ ಅಭಿಯಾನವನ್ನು ಪ್ರಾರಂಭಿಸಿದ ನಾವು ಈಗ ಗೆಲುವಿನೊಂದಿಗೆ ಬೇರ್ಪಡುತ್ತಿದ್ದೇವೆ. ಈ ವರ್ಷ ನಾವು ಅದ್ಭುತ ಜಯಗಳನ್ನು ಕಂಡೆವು. ನಮ್ಮಿಬ್ಬರ ನಡುವೆ ಆತ್ಮೀಯ ಗೆಳೆತನವಿದೆ. ಇದು ನನ್ನ ಪಾಲಿಗೆ ಅತಿ ವಿಶೇಷವಾದುದು. ಇದು ನಮ್ಮ ಕೊನೆಯ ಟೂರ್ನಿ ಎಂದು ಹೇಳಲು ಖೇದವಾಗುತ್ತಿದೆ. ನಾವಿಬ್ಬರು ಜತೆಯಾಗಿ ಕಳೆದ ದಿನಗಳು ಅದ್ಭುತ,'' ಎಂದು ಜಿಂಬಾಬ್ವೆಯ ಆಟಗಾರ್ತಿ ಕಾರಾ ಬ್ಲಾಕ್ ಹೇಳಿಕೊಂಡಿದ್ದಾರೆ. 
 
ಇದು ಸಾನಿಯಾ-ಕಾರಾ ಜೋಡಿಯ ಕೊನೆಯ ಪಂದ್ಯವಾಗಿದ್ದು ಭವಿಷ್ಯದಲ್ಲಿ ಇಬ್ಬರೂ ಆಟಗಾರ್ತಿಯರು ಬೇರೆ ಜೊತೆಗಾರರೊಂದಿಗೆ  ಮುಂದುವರಿಯಲಿದ್ದಾರೆ. 

ವೆಬ್ದುನಿಯಾವನ್ನು ಓದಿ