ಸಿಂಗಪುರ ಓಪನ್‌: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಶ್ರೀಕಾಂತ್, ಸಿಂಧು, ಪ್ರಣಿತ್

ಶುಕ್ರವಾರ, 11 ಏಪ್ರಿಲ್ 2014 (18:17 IST)
PR
300,000 ಡಾಲರ್‌‌‌ ಮೊತ್ತದ ಬಹುಮಾನ ಹೊಂದಿರುವ ಸಿಂಗಾಪುರ್ ಸೂಪರ್ ಸೀರೀಜ್‌ ಬ್ಯಾಡ್ಮಿಂಟನ್‌‌‌‌ ಟೂರ್ನಮೆಂಟ್‌‌ನಲ್ಲಿ ಭಾರತದ ಯುವ ಆಟಗಾರರಾದ ಪಿವಿ ಸಿಂಧು, ಶ್ರೀಕಾಂತ ಕಿದಾಮ್ಬಿ ಮತ್ತು ವಿ ಸಾಯಿ ಪ್ರಣಿತ ಕ್ಚಾರ್ಟರ್‌ ಫೈನಲ್‌ನಲ್ಲಿ ಪ್ರವೇಶ ಪಡೆದಿದ್ದಾರೆ.

ಕಳೆದ ವರ್ಷ ಮಲೇಷಿಯಾ ಓಪನ್‌‌‌‌ ಮತ್ತು ಮಕಾವು ಓಪನ್‌‌‌ ಹೊರತುಪಡಿಸಿ ಪ್ರತಿಷ್ಠಿತ ವಿಶ್ವ ಚಾಂಪಿಯನ್‌‌‌‌ನಲ್ಲಿ ಕಂಚಿನ ಪದಕ ಪಡೆದ 18 ವರ್ಷದ ಸಿಂಧು ಮಹಿಳಾ ಸಿಂಗಲ್ಸ್‌‌ನಲ್ಲಿ ಜಪಾನ ದೇಶದ ಶಿಜುಕಾ ಉಚಿದಾರನ್ನು 21-17, 17-21, 21-16 ಅಂತರದಿಂದ ಸೋಲಿಸಿದ್ದಾರೆ.

ಈ ಭಾರತೀಯ ಆಟಗಾರ್ತಿ ತಮ್ಮ ಮುಂದಿನ ಪಂದ್ಯದಲ್ಲಿ ವಿಶ್ವದ 9ನೇ ಶ್ರೇಯಾಂಕಿತ ವಾಂಗ್‌‌ರ ವಿರುದ್ದ ಸೆಣಸಾಟ ನಡೆಸಲಿದ್ದಾರೆ. ಆಲ್‌ ಇಂಗ್ಲೆಂಡ್‌‌‌ , ಸ್ವಿಸ್‌‌ ಓಪನ್ ಮತ್ತು ಇಂಡಿಯಾ ಸೂಪರ್‌‌ ಸೀರೀಜ್ ನಲ್ಲಿ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ ನಂತರ ಶ್ರೀಕಾಂತ ಕೊನೆಯ ಪ್ರಯತ್ನದಲ್ಲಿ ತಮ್ಮ ಎದುರಾಳಿಯಾದ ಪುರುಷ ಸಿಂಗಲ್ಸ್‌‌ನಲ್ಲಿ ವಿಶ್ವ ಚಾಂಪಿಯನ್‌‌‌ಶಿಪ್‌‌‌‌‌‌‌ನಲ್ಲಿ ಕಂಚಿನ ಪದಕ ಪಡೆದ ಮತ್ತು ವಿಶ್ವದಲ್ಲಿ 10 ನೇ ಶ್ರೇಯಾಂಕಿತ ವಿಯರನಾಮಿಯ ಆಟಗಾರ ಟಿಎನ್‌ ಮಿನ್‌‌ ನಗುಎನ್‌‌ರನ್ನು 18-21, 21-15, 21-8 ಅಂತರದಿಂದ ಸೋಲಿಸಿದ್ದಾರೆ.

ಪುರುಷ ಸಿಂಗಲ್ಸ್‌‌‌ನಲ್ಲಿ ವಿಶ್ವದ 50ನೇ ಸ್ಥಾನದ ಸಾಯಿ ಪ್ರಣಿತ ತಮ್ಮ ಎದುರಾಳಿಯಾದ ಸಿಂಗಪುರದ ಜಿ ಲಿಯಾಕ್ ಡೆರೆಕ್ ವಾಂಗ್‌‌‌‌ರನ್ನು 39 ನಿಮಿಷದವರೇಗೆ ನಡೆದ ಪಂದ್ಯದಲ್ಲಿ 24-22, 21-19 ಅಂತರದಿಂದ ಸೋಲಿಸಿದ್ದಾರೆ. ಇವರು ಸಾಯಿ ಪ್ರಣಿತ ಮುಂದಿನ ಪಂದ್ಯದಲ್ಲಿ ತಮ್ಮ ಎದುರಾಳಿಯಾದ ಚೀನಾದ 5ನೇ ಶ್ರೇಯಾಂಕಿತ ಡು ಪೆಂಗು ವಿರುದ್ದ ಸೆಣಸಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ