10ನೇ ಪಂದ್ಯವೂ ಡ್ರಾ : ಸೋಲಿನ ಸುಳಿಯಲ್ಲಿ ವಿಶ್ವನಾಥನ್ ಆನಂದ್

ಶನಿವಾರ, 22 ನವೆಂಬರ್ 2014 (15:58 IST)
ಐದು ಬಾರಿ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಸೋಚಿಯಲ್ಲಿ ನಡೆಯುತ್ತಿರುವ ಚೆಸ್ ವಿಶ್ವ ಕಪ್ ಟೂರ್ನಿಯಲ್ಲಿ ಕಾರ್ಲ್‌ಸನ್ ಮುನ್ನಡೆಯನ್ನು ಮುರಿಯಲು ವಿಫಲರಾಗಿದ್ದು, 10ನೇ ಪಂದ್ಯದಲ್ಲಿ ಡ್ರಾ ಮಾಡಿಕೊಳ್ಳುವ  ಮೂಲಕ ಸೋಲಿನ ಸುಳಿಯಲ್ಲಿದ್ದಾರೆ. 
 
 10 ಪಂದ್ಯಗಳಲ್ಲಿ ಏಳು ಡ್ರಾಗಳಿಂದ, ಆನಂದ್ ಅವರು ಕಾರ್ಲ್‌ಸನ್ ಅವರಿಗಿಂತ ಒಂದು ಪಾಯಿಂಟ್ ಹಿಂದಿದ್ದು, ನಾರ್ವೆಯ ಪೌರ ಆನಂದ್ ವಿರುದ್ದ ಕಳೆದ ಬಾರಿ ಗೆದ್ದಿದ್ದ ವಿಶ್ವಕಪ್ ಕಿರೀಟವನ್ನು ಉಳಿಸಿಕೊಳ್ಳಲು ಇನ್ನು ಒಂದು ಪಾಯಿಂಟ್ ಮಾತ್ರ ಬಾಕಿವುಳಿದಿದೆ. 
 
ಈಗ ಅಂಕಪಟ್ಟಿಯಲ್ಲಿ 5.5-4.5 ಕಾರ್ಲ್‌ಸನ್‌ ಪರವಾಗಿದ್ದು, ಕೊನೆಯ ಪಂದ್ಯದಲ್ಲಿ ಅವರು ಬಿಳಿಯ ಕಾಯಿಗಳೊಂದಿಗೆ ಆಡಲಿದ್ದಾರೆ.ಕಾರ್ಲ್‌ಸನ್ ಈ ಪಂದ್ಯದಲ್ಲಿ ಗ್ರನ್‌ಫೆಲ್ಡ್ ಡಿಫೆನ್ಸ್‌‍‌‌ನೊಂದಿಗೆ ಆಟ ಆರಂಭಿಸಿದಾಗ  ಎಲ್ಲರಿಗೂ ಆಶ್ಚರ್ಯವಾಗಿತ್ತು. ಕಾರ್ಲ್‌ಸನ್ ತಮ್ಮ ಮೊದಲ ಆಟದಲ್ಲಿ ಈ ಓಪನಿಂಗ್‌ನೊಂದಿಗೆ ಆಡಿ ಗೆದ್ದಿದ್ದರು.

 ದುರದೃಷ್ಟವಶಾತ್ ಆನಂದ್‌ಗೆ ಅವಕಾಶವಿದ್ದರೂ ಮೊನಚಿನ ಸ್ಥಾನಗಳಿಗೆ ಹೋಗದಿರಲು ನಿರ್ಧರಿಸಿದ್ದರಿಂದ ಕಾರ್ಲ್‌ಸನ್‌ಗೆ ಡ್ರಾ ಮಾಡಿಕೊಳ್ಳಲು ನೆರವಾಯಿತು ಎಂದು ಮಾಜಿ ಮಹಿಳಾ ಚಾಂಪಿಯನ್ ಸುಸಾನ್ ಪೊಲ್ಗಾರ್ ಟ್ವೀಟ್ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ