ರಿಯೊ ಒಲಿಂಪಿಕ್ಸ್‌ಗೆ ಏಳು ಬ್ಯಾಡ್ಮಿಂಟನ್ ಆಟಗಾರರು

ಗುರುವಾರ, 9 ಜೂನ್ 2016 (17:29 IST)
ಆಗಸ್ಟ್‌ನಲ್ಲಿ ಭಾರತವು ಏಳು ಬ್ಯಾಡ್ಮಿಂಟನ್ ಆಟಗಾರರನ್ನು ರಿಯೊ ಒಲಿಂಪಿಕ್ಸ್‌ಗೆ ಕಳಿಸಿಕೊಡಲಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್  ಕ್ರೀಡಾಕೂಟದಲ್ಲಿ ದೇಶದಿಂದ ಆಡುತ್ತಿರುವ ಅತೀ ದೊಡ್ಡ ಬ್ಯಾಡ್ಮಿಂಟನ್ ತಂಡ ಇದಾಗಿದೆ.

ಸೈನಾ ನೆಹ್ವಾಲ್, ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್, ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ, ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಅವರಿಂದ ಅಭಿಮಾನಿಗಳ ನಿರೀಕ್ಷೆಯ ಮಟ್ಟವು ಅಭೂತಪೂರ್ವವಾಗಿದೆ.  ನಾವು ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಪ್ರಗತಿ ಸಾಧಿಸಿದ್ದೇವೆ.  ಆದ್ದರಿಂದ 7 ಮಂದಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದೇವೆ.  

ಕಳೆದ ಬಾರಿ ನಾವು ಮಿಶ್ರಿತ ಡಬಲ್ಸ್ ಜೋಡಿಯನ್ನು ಹೊಂದಿದ್ದೆವು.  ಆದರೂ ರಿಯೊದಲ್ಲಿ ಪುರುಷರ ಡಬಲ್ಸ್ ಟೀಂ ಇರುವುದು ಮಹತ್ತರವಾದ್ದರಿಂದ ನಮಗೆ ಸಮಾಧಾನವಾಗಿದೆ ಎಂದು ಅಶ್ವಿನಿ ಹೇಳಿದ್ದಾರೆ.  ಮಹಿಳಾ ಡಬಲ್ಸ್ ಜೋಡಿಯಾದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಎರಡನೇ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಆಡುತ್ತಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ