ಕೋಚ್ ಬಗ್ಗೆ ವಿರಾಟ್ ಕೊಹ್ಲಿಗೆ ಟಾಂಗ್ ಕೊಟ್ಟ ಶೂಟರ್ ಅಭಿನವ್ ಬಿಂದ್ರಾ

ಬುಧವಾರ, 21 ಜೂನ್ 2017 (10:45 IST)
ನವದೆಹಲಿ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ ನಂತರ ಹಲವು ಮಾಜಿ ಆಟಗಾರರು, ಅಭಿಮಾನಿಗಳು ನಾಯಕ ವಿರಾಟ್ ಕೊಹ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

 
ಕುಂಬ್ಳೆ ಮತ್ತು ಕೊಹ್ಲಿ ಮನಸ್ತಾಪದಿಂದಾಗಿಯೇ ಈ ರಾಜೀನಾಮೆ ಪ್ರಹಸನ ನಡೆಯಿತು ಎಂದು ಸುದ್ದಿಯಿದೆ. ಅಲ್ಲದೆ, ಕುಂಬ್ಳೆ ಸ್ಟ್ರಿಕ್ಟ್ ಆಗಿರುತ್ತಾರೆ, ಹಾಗಾಗೂ ಆಟಗಾರರಿಗೆ ಭಾರೀ ಶಿಸ್ತು ವಿಧಿಸುತ್ತಾರೆ ಎಂಬುದು ಆಟಗಾರರ ಆರೋಪ ಎಂಬ ವರದಿಗಳ ಬೆನ್ನಲ್ಲೇ ಶೂಟರ್ ಅಭಿನವ್ ಬಿಂದ್ರಾ ಕೊಹ್ಲಿಗೆ ಟಾಂಗ್ ಕೊಡುವಂತಹ ಟ್ವೀಟ್ ಮಾಡಿದ್ದಾರೆ.

‘ಉವೆ ನನ್ನ ದೊಡ್ಡ ಗುರುವಾಗಿದ್ದರು. ಆದರೆ ಅವರನ್ನು ನಾನು ಇಷ್ಟಪಡುತ್ತಿರಲಿಲ್ಲ! ಹಾಗಿದ್ದರು ಅವರ ಜತೆ 20 ವರ್ಷ ಇದ್ದೆ. ಅವರು ಯಾವತ್ತೂ ನನಗೆ ಇಷ್ಟವಿಲ್ಲದ ಸಂಗತಿಗಳನ್ನೇ ಹೇಳುತ್ತಿದ್ದರು’ ಎಂದು ಬಿಂದ್ರಾ ಮಾರ್ಮಿಕವಾಗಿ ಹೇಳಿಕೊಂಡಿರುವುದು ವಿರಾಟ್ ಕೊಹ್ಲಿಗೆ ನೀಡಿದ ಟಾಂಗ್ ನಂತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ