ವಿಂಬಲ್ಡನ್ ಪುರುಷರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಆ್ಯಂಡಿ ಮರ್ರೆ

ಸೋಮವಾರ, 11 ಜುಲೈ 2016 (17:56 IST)
ವಿಂಬಲ್ಡನ್ ಗ್ರಾಂಡ್ ಸ್ಲಾಮ್ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಕೆನಡಾದ ಮಿಲೊಸ್ ರಾಯೊನಿಕ್ ಅವರನ್ನು 6-4, 7-6 , 7-6ರಲ್ಲಿ ಸೋಲಿಸಿ ಮೂರನೇ ಗ್ರಾಂಡ್ ಸ್ಲಾಮ್ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ. 2013ರಲ್ಲಿ ಮರ್ರೆ ಮೊದಲ ಸಲ ಚಾಂಪಿಯನ್ ಆಗಿದ್ದರು.
 
 1935ರಲ್ಲಿ ಫ್ರೆಡ್ ಪೆರಿ ಬಳಿಕ ಮರ್ರೆ ಬಹು ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಮೊದಲ ಬ್ರಿಟಿಷ್ ಆಟಗಾರರಾಗಿದ್ದಾರೆ. 2012ರಲ್ಲಿ ರೋಜರ್ ಫೆಡರರ್ ವಿರುದ್ಧ ಪ್ರಥಮ ವಿಂಬಲ್ಡನ್ ಫೈನಲ್ ಸೋತಿದ್ದ ಮರ್ರೆ ಕಂಬನಿಭರಿತ ಭಾಷಣ ಮಾಡಿದ್ದರು.
 
12 ತಿಂಗಳ ಬಳಿಕ ಅವರು ಅಂತಿಮವಾಗಿ ಬ್ರಿಟನ್ ಪುರುಷರ ಚಾಂಪಿಯನ್‌ಗಾಗಿ 77 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿ ಚಾಂಪಿಯನ್ನರಾದರು. ಮರ್ರೆ ತಮ್ಮ  ಸಾಧನೆಯನ್ನು ಪುನರಾವರ್ತಿಸುವ ಅವಕಾಶವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ