ಏಷ್ಯನ್ ಚಾಂಪಿಯನ್ಸ್ ಶಿಪ್ ಫುಟ್ ಬಾಲ್: ಸೋತ ಬೆಂಗಳೂರು ಎಫ್ ಸಿ
ಭಾನುವಾರ, 6 ನವೆಂಬರ್ 2016 (10:55 IST)
ದೋಹಾ: ಏಷ್ಯನ್ ಫುಟ್ ಬಾಲ್ ಮಹಾ ಒಕ್ಕೂಟದ ಫೈನಲ್ ನಲ್ಲಿ ಪ್ರಶಸ್ತಿ ಗೆಲ್ಲುತ್ತದೆ ಎಂಬ ಕೋಟ್ಯಾಂತರ ಭಾರತೀಯರ ನಿರೀಕ್ಷೆಯನ್ನು ಬೆಂಗಳೂರು ಎಫ್ ಸಿ ಹುಸಿಗೊಳಿಸಿದೆ. ಇರಾಕ್ ವಿರುದ್ಧ ಬೆಂಗಳೂರು ತಂಡ ಸೋತು ಇತಿಹಾಸ ನಿರ್ಮಿಸುವ ಅವಕಾಶ ಕಳೆದುಕೊಂಡಿದೆ.
ಅತ್ತ ಇರಾಕ್ ತಂಡವೂ ಕೂಡಾ ಚೊಚ್ಚಲ ಪ್ರಶಸ್ತಿ ಗೆದ್ದ ಸಂಭ್ರಮ ಆಚರಿಸಿತು. ಕತಾರ್ ಸ್ಫೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇರಾಕ್ ತಂಡ ಬೆಂಗಳೂರು ತಂಡವನ್ನು 1-0 ಅಂತರದಿಂದ ಸೋಲಿಸಿತು. ಇರಾಕ್ ಪರ ಹಮ್ಮದಿ ಅಹ್ಮದ್ ಏಕಮಾತ್ರ ಗೋಲು ಗಳಿಸಿದರು.
ಸೋತರೂ ಬೆಂಗಳೂರು ತಂಡ ಪ್ರಬಲ ಪೈಪೋಟಿ ಒಡ್ಡಿತು. 70 ನಿಮಿಷದವರೆಗೆ ಎದುರಾಳಿಗೆ ಯಾವುದೇ ಗೋಲು ಗಳಿಸಲು ಅವಕಾಶ ನೀಡಿರಲಿಲ್ಲ. 55 ನೇ ನಿಮಿಷದಲ್ಲಿ ಬೆಂಗಳೂರು ತಂಡಕ್ಕೆ ಗೋಲು ಗಳಿಸುವ ಅವಕಾಶವಿದ್ದರೂ ಸಫಲವಾಗಲಿಲ್ಲ. ವಿಜೇತ ತಂಡಕ್ಕೆ 6.6 ಕೋಟಿ ರೂ. ಮತ್ತು ರನ್ನರ್ ಅಪ್ ತಂಡಕ್ಕೆ 3.3. ಕೋಟಿ ರೂ. ಬಹುಮಾನ ಸಂದಾಯವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ