ಎಟಿಪಿ ರ್ಯಾಂಕಿಂಗನಲ್ಲಿ ಕುಸಿತ ಕಾಣಲಿರುವ ಸೋಮದೇವ್ ದೇವವರ್ಮನ್

ಮಂಗಳವಾರ, 22 ಏಪ್ರಿಲ್ 2014 (16:17 IST)
ಎಟಿಪಿ ವಿಶ್ವ ಸಿಂಗಲ್ಸ್‌ ಶ್ರೇಯಾಂಕದಲ್ಲಿ ಭಾರತದ ಟೆನಿಸ್‌ ಆಟಗಾರ ಸೋಮದೇವ್ ದೇವವರ್ಮನ್ 11 ಸ್ಥಾನ ಕೆಳಕ್ಕೆ ಇಳಿಯುವುದರ ಮೂಲಕ ಅಗ್ರ 100 ರಿಂದ ಹೊರಗಡೆ ಬರುವುದರ ಹತ್ತಿರದಲ್ಲಿದ್ದಾರೆ. ಆದರೆ, ಡಬಲ್ಸ್‌‌‌ನಲ್ಲಿ ಲಿಯಾಂಡರ್‌ ಪೇಸ್‌ ಒಂದು ಸ್ಥಾನ ಬಡ್ತಿಪಡೆದಿದ್ದಾರೆ. 
 
ಪುರುಷ ಸಿಂಗಲ್ಸ್‌‌‌ನಲ್ಲಿ ಭಾರತದ ಎಲ್ಲ ಅಗ್ರ ಶ್ರೇಣಿಯ ಆಟಗಾರರು ರ್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ.  ಸೋಮದೇವ್ 11 ಸ್ಥಾನ ಕೆಳಕ್ಕೆ ಕುಸಿದು 100 ಶ್ರೇಯಾಂಕ್ಕೆ ತಲುಪಿದ್ದಾರೆ . ಈಗ ಇವರಿಗೆ ಕೇವಲ 582 ಅಂಕಗಳು ಇವೆ, ಡೇವಿಸ್‌ ಕಪ್‌‌ನಲ್ಲಿ ಇವರ ಜೋಡಿಯಾಟಗಾರ ಯುಕಿ ಭಾಂಬ್ರಿ ಮೂರು ಸ್ಥಾನ ಕುಸಿತ ಕಾಣುವುದರ ಮೂಲಕ 149 ನೇ ಮತ್ತು ಸಾಕೇತ್‌ ಮಯನೆನಿ 9 ಸ್ಥಾನ ಕುಸಿತಕ ಕಾಣುವದರ ಮೂಲಕ 269ನೇ ಸ್ಥಾನದಲ್ಲಿ ಉಳಿದಿದ್ದಾರೆ. 
  
ಡಬಲ್ಸ್‌‌‌ನಲ್ಲಿ ಪೇಸ್‌ ಈಗಲು ಅಗ್ರ ಶ್ರೇಣಿಯಲ್ಲಿಯೇ ಇದ್ದಾರೆ ಫರ್ನಾಂಡೊ ವಡಾಸ್ಕೊ ಒಂದು ಸ್ಥಾನ ಕುಸಿತ ಕಂಡ ಕಾರಣ ಪೇಸರ್‌‌ವರು ರ್ಯಾಂಕಿಂಗ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ ಮತ್ತು ಪೇಸ್ 9 ನೇ ಸ್ಥಾನಕ್ಕೆ ತಲುಪಿದ್ದಾರೆ. 
  
 ಶ್ರೇಯಾಂಕಿತದಲ್ಲಿ ಯಾವುದೇ ಬದಲಾವಣೆ ಕಾಣದ ರೋಹನ್‌ ಬಿಪಣ್ಣಾ (14ನೇ) ಮತ್ತು ಮಹೇಶ ಭೂಪತಿ (47ನೇ) ಶ್ರೇಯಾಂಕದಲ್ಲಿಯೇ  ಉಳಿದುಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ