ಆಸ್ಟ್ರೇಲಿಯಾ ಓಪನ್: ಸಾನಿಯಾ-ಹಿಂಗಿಸ್ ಜೋಡಿ ಮುಡಿಗೆ ಪ್ರಶಸ್ತಿಯ ಕಿರೀಟ

ಶುಕ್ರವಾರ, 29 ಜನವರಿ 2016 (16:00 IST)
ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲ್ಯಾಮ್ ಪಂದ್ಯಾವಳಿಯ ಮಹಿಳಾ ಡಬಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಪ್ರಶಸ್ತಿ ಪಡೆದಿದ್ದು, ಸತತ 36 ನೇ ಬಾರಿ ಜಯಭೇರಿ ದಾಖಲಿಸಿದೆ. 
 
ಇಂಡೋ-ಸ್ವಿಸ್ ಜೋಡಿ ಮಹಿಳಾ ಡಬಲ್ಸ್ ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿ ಜೋಡಿಯಾದ ಆಂಡ್ರೆಯಾ ಹ್ಲಾವಾಕೊವೀ ಮತ್ತು ಲೂಸಿಯಾ ರಾಡೆಕ್ಕಾ ವಿರುದ್ಧ 7-6, 6-3 ಸೆಟ್‌ಗಳ ಅಂತರದಿಂದ ಜಯಗಳಿಸಿತು.
 
ಸಾನಿಯಾ ಮತ್ತು ಮಾರ್ಟಿನಾ ಜೋಡಿ ವಿಶ್ವದ ಸರ್ವಕಾಲಿಕ ದಾಖಲೆ ಸ್ಥಾಪಿಸಿದ ಜಾನಾ ನೊವೊಟ್ನಾ ಮತ್ತು ಹೆಲೆನಾ ಸುಕೋವಾ ಜೋಡಿಯ(44 ಪಂದ್ಯಗಳ ಗೆಲುವು) ಸರಿಗಟ್ಟಲು ಕೇವಲ 8 ಪಂದ್ಯಗಳಉ ಬಾಕಿ ಉಳಿದಿವೆ.
 
ಕಳೆದ ಡಿಸೆಂಬರ್ ತಿಂಗಳಲ್ಲಿ ಸಾನಿಯಾ ಮತ್ತು ಹಿಂಗಿಸ್ ಜೋಡಿ ವರ್ಷದ ಡಬಲ್ಸ್ ತಂಡ ಎನ್ನುವ ಗೌರವಕ್ಕೆ ಪಾತ್ರವಾಗಿದೆ. 
 
ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಜೋಡಿ ತಮ್ಮ ಎದುರಾಳಿ ಜೋಡಿಯಾದ ಜ್ಯೂಲಿಯಾ ಜಾರ್ಜೆಸ್ ಮತ್ತು ಕರೋಲಿನಾ ಪ್ಲಿಸ್ಕೋವಾ ಜೋಡಿ ವಿರುದ್ಧ 6-1 6-0 ಸೆಟ್‌ಗಳ ಅಂತರದಿಂದ ಜಯಗಳಿಸಿ ಫೈನಲ್‌ಗೆ ತಲುಪಿತ್ತು.
 

ವೆಬ್ದುನಿಯಾವನ್ನು ಓದಿ