ಏಷ್ಯಾ ಬಾಡ್ಮಿಂಟನ್‌‌‌ ಪಂದ್ಯಾವಳಿಗೆ ಸೈನಾ ನೆಹ್ವಾಲ್ ಗೈರು

ಮಂಗಳವಾರ, 22 ಏಪ್ರಿಲ್ 2014 (16:22 IST)
ಮಚಿಯೊನ್‌‌ನಲ್ಲಿ ಪ್ರಾರಂಭವಾಗುತ್ತಿರುವ 200,000 ಡಾಲರ್‌‌ ಮೊತ್ತದ ಬಹುಮಾನವುಳ್ಳ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌‌ನಲ್ಲಿ  ಭಾರತೀಯ ಮಹಿಳಾ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್ ಭಾಗವಹಿಸುತ್ತಿಲ್ಲ. ಆದರೆ ಪಿವಿ ಸಿಂಧು ಮತ್ತು ರಾಷ್ಟ್ರೀಯ ಚಾಂಪಿಯನ್‌‌ ಶ್ರೀಕಾಂತ್ ಮಾತ್ರ ಭಾಗವಹಿಸುತ್ತಿದ್ದಾರೆ. 
 
ಮುಂದಿನ ತಿಂಗಳು ನಡೆಯಲಿರುವ ಥಾಮಸ್‌ ಮತ್ತು ವುಬೆರ್‌ ಕಪ್‌ ಗಳಲ್ಲಿ ಸೈನಾ ಭಾಗವಹಿಸಲಿದ್ದಾರೆ. ಅಲ್ಲಿಯವರೆಗೂ ರೆಸ್ಟ್ ಮಾಡಲು ಸೈನಾ ನಿರ್ಧರಿಸಿದ್ದಾರೆ. ಈಗ ಭಾರತಕ್ಕೆ ಉತ್ತಮ ಹೆಸರನ್ನು ತರಲು ಸಿಂಧು ಮತ್ತು ಶ್ರೀಕಾಂತ ಪ್ರಯತ್ನ ಪಡಬೇಕಾಗಿದೆ. 
 
ಸಿಂಧು ಕಳೆದ ವರ್ಷ ಮಲೇಷಿಯಾ ಓಪನ್‌‌ ಮತ್ತು ಮಕಾವು ಓಪನ್‌‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸಿಂಧುರವರು 18ನೇ ವರ್ಷದಲ್ಲಿದ್ದಾಗಲೇ ತಮ್ಮ ಅಭಿಯಾನ ಪ್ರಾರಂಭ ಮಾಡಿದ್ದರು. ಪ್ರಾರಂಭದ ಮಹಿಳಾ ಸಿಂಗಲ್ಸ್‌‌ನಲ್ಲಿ ಚೆಯುಂಗ್ ನಗಾನ್ ವಿರುದ್ದ ಸಿಂಧು ರವರು ಆಡಲಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಸಿಂಧು ಜಪಾನ್‌ನ ಎರಿಕೊ ಹಿರೊಸೆರನ್ನು ಎದುರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ವೆಬ್ದುನಿಯಾವನ್ನು ಓದಿ