ಬಾಕ್ಸಿಂಗ್ ಸೆಮಿಫೈನಲ್‌ನಲ್ಲಿ ವಿವಾದಾತ್ಮಕ ತೀರ್ಪು: ಸರಿತಾ ದೇವಿ ಕಣ್ಣೀರು

ಬುಧವಾರ, 1 ಅಕ್ಟೋಬರ್ 2014 (16:57 IST)
ಬುಧವಾರ ಏಷ್ಯನ್ ಕ್ರೀಡಾಕೂಟದಲ್ಲಿ ಇಬ್ಬರು ಮಹಿಳಾ  ಬಾಕ್ಸರುಗಳು ವಿರುದ್ಧ ಭಾವನೆಗಳನ್ನು ಪ್ರದರ್ಶಿಸಿದ ದೃಶ್ಯ ಕಂಡುಬಂತು. ಮೇರಿ ಕೋಮ್ ಚಿನ್ನದ ಪದಕ ಗೆದ್ದು ಸಂತೋಷಭರಿತರಾಗಿದ್ದರೆ, ಸೆಮಿಫೈನಲ್‌ನಲ್ಲಿ ಸೋತ ಸರಿತಾ ದೇವಿ ದುಃಖದ ಕಡಲಲ್ಲಿ ಮುಳುಗಿದರು. ವಿವಾದಾತ್ಮಕ ಸೋಲನ್ನು ಪ್ರತಿಭಟಿಸಲು  ಸರಿತಾ ದೇವಿ ತನಗೆ ನೀಡಿದ ಕಂಚಿನ ಪದಕ ಧರಿಸಲು ನಿರಾಕರಿಸುತ್ತಾ ವೇದಿಕೆ ಮೇಲೆ ಅಳುತ್ತಾ ನಿಂತಿದ್ದ ದೃಶ್ಯ ಹೃದಯಸ್ಪರ್ಶಿಯಾಗಿತ್ತು.

ಮೇರಿ ಕೋಮ್ ಏಷ್ಯನ್ ಕ್ರೀಡಾಕೂಟದಲ್ಲಿ ಕಜಕಸ್ಥಾನದ ಜೈನಾ ಶೇಕರ್‌ಬೆಕೋವಾ ಅವರನ್ನು ಸೋಲಿಸಿದ ಶುಭ ಸುದ್ದಿಯ ನಡುವೆ ಇಂಚಾನ್‌ನಲ್ಲಿ ಸರಿತಾ ಸೆಮಿಫೈನಲ್ ಸೋಲಿನಿಂದ ದುಃಖಕರ ಸನ್ನಿವೇಶ ಕಂಡುಬಂತು.ಸರಿತಾ ಬಹುಮಾನದ ವೇದಿಕೆ ಮೇಲೆ ಅಳುತ್ತಾ ಕಂಚಿನ ಪದಕವನ್ನು ಧರಿಸಲು ನಿರಾಕರಿಸಿ ಕೈಯಲ್ಲಿ ಮಾತ್ರ ಪದಕವನ್ನು ಹಿಡಿದಿದ್ದ ದೃಶ್ಯ ಹೃದಯಸ್ಪರ್ಶಿಯಾಗಿತ್ತು.  

 ದಕ್ಷಿಣ ಕೊರಿಯಾ ಜಿನಾ ಪಾರ್ಕ್ ವಿರುದ್ಧ ಮೇಲುಗೈ ಪ್ರದರ್ಶನ ನೀಡಿ ಎದುರಾಳಿ ಮೂಗಿನಲ್ಲಿ ರಕ್ತ ಸುರಿಸಿದ್ದರೂ ಸರಿತಾಗೆ ವಿಜಯಲಕ್ಷ್ಮಿ ಒಲಿಯಲಿಲ್ಲ.  ಭಾರತದ ತಂಡ ಪುನರ್ಪರಿಶೀಲನೆ ಅರ್ಜಿ ಸಲ್ಲಿಸಿದರೂ ಭಾರತದ ಮನವಿ ವ್ಯರ್ಥವಾಯಿತು. 

ವೆಬ್ದುನಿಯಾವನ್ನು ಓದಿ