ರಿಯೊ ಒಲಿಂಪಿಕ್ಸ್‌ಗೆ ಪ್ರಯಾಣಿಸಲಿರುವ ಸಚಿನ್ ತೆಂಡೂಲ್ಕರ್

ಶನಿವಾರ, 23 ಜುಲೈ 2016 (18:14 IST)
ಭಾರತದ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಮತ್ತು ಇತರೆ ಗಣ್ಯ ವ್ಯಕ್ತಿಗಳಿಂದ ಆಹ್ವಾನದ ಮೇಲೆ ರಿಯೊ ಒಲಿಂಪಿಕ್ಸ್‌ಗೆ ಪ್ರಯಾಣಿಸಲಿದ್ದಾರೆ. ಭಾರತದ ಒಲಿಂಪಿಕ್ ಸಂಸ್ಥೆಯ ಸದ್ಭಾವನೆ ರಾಯಭಾರಿಯಾಗಿರುವ ತೆಂಡೂಲ್ಕರ್ ಆಗಸ್ಟ್ 2ರಂದು ಬ್ರೆಜಿಲ್ ನಗರಕ್ಕೆ ತೆರಳಲಿದ್ದು ತಮ್ಮ ಪ್ರವಾಸದ ಸಂದರ್ಭದಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಭಾರತದ ತಂಡವನ್ನು ಭೇಟಿ ಮಾಡಲಿದ್ದಾರೆ.
 
ಸಚಿನ್ ಇತ್ತೀಚೆಗೆ ಮುಂಬೈ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಬ್ರೆಜಿಲ್ ಮುಂತಾದ ರಾಷ್ಟ್ರಗಳಲ್ಲಿ ಕಡ್ಡಾಯವಾದ ಹಳದಿ ಜ್ವರದ ಚುಚ್ಚುಮದ್ದನ್ನು ಹಾಕಿಸಿಕೊಂಡರು ಎಂದು ಮೂಲವೊಂದು ಹೇಳಿದೆ.
 
ಲಂಡನ್‌ನಲ್ಲಿ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದ ತೆಂಡೂಲ್ಕರ್ ರಿಯೊಗೆ ಹೋಗಲು ಫಿಟ್ ಆಗಿರುತ್ತಾರೆಂದು ನಿರೀಕ್ಷಿಸಲಾಗಿದೆ. ರಿಯೊದಲ್ಲಿ ಒಲಿಂಪಿಕ್‌ನ ಟೀಂ ಇಂಡಿಯಾಗೆ ಬೆಂಬಲಿಸಲು ಅವರು ಕಾತುರರಾಗಿದ್ದಾರೆ. 2024ರ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕೂಡ ಒಲಿಂಪಿಕ್ಸ್ ಕ್ರೀಡೆಯಲ್ಲಿ ಸೇರಿಸಲಾಗುತ್ತದೆಂಬ ಊಹಾಪೋಹದ ನಡುವೆ ಸಚಿನ್ ರಿಯೊ ಪ್ರವಾಸ ಹೊರಬಿದ್ದಿದೆ.
 
ರಾಯಭಾರಿಯಾಗಿ ತೆಂಡೂಲ್ಕರ್ ರಿಯೊಗೆ ತೆರಳುವ ಕುಸ್ತಿ ತಂಡವನ್ನು ಭೇಟಿ ಮಾಡಿದ್ದರು. ಕುಸ್ತಿ ತಂಡದ ಜತೆಗಿರುವ ಚಿತ್ರವನ್ನು ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ