ದಿನಗೂಲಿ ನೌಕರನ ಮಗ ದೇಶಕ್ಕೆ ತಂದ ಕಂಚಿನ ಪದಕ

ಭಾನುವಾರ, 27 ಜುಲೈ 2014 (16:27 IST)
ದಿನಗೂಲಿ ನೌಕರ ಚಂದ್ರಕಾಂತ ಮಾಳಿಗೆ ಅವರ ಮಗ ಗಣೇಶ, ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಅಪ್ರತಿಮ ಸಾಧನೆ ಮಾಡಿದ್ದಾನೆ.

ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 20 ನೇ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಚಂದ್ರಕಾಂತನ ಮಗ ಗಣೇಶ ಕಂಚಿನ ಪದಕ ಗಳಿಸುವ ಮೂಲಕ ಅಪೂರ್ವ ಸಾಧನೆಗೈದು ರಾಷ್ಟ್ರಕ್ಕೆ ಕೀರ್ತೀ ತಂದಿದ್ದಾನೆ. ಈ ಸುದ್ದಿ ತಿಳಿದ ತಂದೆ ಚಂದ್ರಕಾಂತ ಮಾಳಿಗೆ ಆದ ಸಂತಸ ಅಷ್ಟಿಷ್ಟಲ್ಲ. ರಾತ್ರಿಪೂರ್ತಿ ನಿದ್ದೆಗೆಟ್ಟು ಮಗನ ಸಾಧನೆಯ ಕುರಿತ ಹೆಮ್ಮೆಯಿಂದ ಬೀಗುತ್ತಿದ್ದರವರು.
 
ಬೆಳಗಿನ ಜಾವ 1-30 ನಿಮಿಷ. ಗಣೇಶ ಕಂಚಿನ ಪದಕ ಪಡೆದ ಎಂಬುದು ತಿಳಿಯುತ್ತಿದ್ದಂತೆಯೇ ಟಿವಿ ಮುಂದೆ ಕುಳಿತಿದ್ದ ನೋಡುತ್ತ ಕುಳಿತ್ತಿದ್ದ ಚಂದ್ರಕಾಂತ ಕಣಿದು ಕುಪ್ಪಳಿಸಿದ್ದರು. ಕಣ್ಣಿಂದ ಆನಂದ ಭಾಷ್ಪ ಸುರಿದವು. ಕುಂಟುಂಬದ ಸದಸ್ಯರು ಈ ಸಂತಸದ ಕ್ಷಣದಲ್ಲಿ ಪಾಲ್ಗೊಂಡಿದ್ದರು. 
 
ಬಡತನದಲ್ಲಿಯೂ ಕ್ರೀಡೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಗಣೇಶ್, ಭಾರ ಎತ್ತುವ ಸ್ಪರ್ಧೆಯ 56 ಕೆಜಿ. ವಿಭಾಗದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆಯುವ ಮೂಲಕ ಇಡೀ ರಾಷ್ಟ್ರವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ.
 
`ನನ್ನ ಸಂತಸಕ್ಕೆ ಇಂದು ಪಾರವೇ ಇಲ್ಲ. ನನ್ನ ಮಗ ಗಣೇಶ ರಾಷ್ಟ್ರಕ್ಕಾಗಿ ಆಡಿ ಕಂಚನ ಪದಕ ಗೆದ್ದಿದ್ದಾನೆ. ಆತ ಕಠಿಣ ಪರಿಶ್ರಮಿಯಾಗಿದ್ದು, ಅದಕ್ಕೆ ದೊರೆತ ಫಲ ಇದಾಗಿದೆ. ಆತ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬುದು ನಮ್ಮ ಆಸೆ' ಎಂದು ಹೇಳುವಾಗ ಅವರಪ್ಪನ ಕಣ್ಣುಗಳಲ್ಲಿ ಅಭಿಮಾನದ ಮಿಂಚು. 

ವೆಬ್ದುನಿಯಾವನ್ನು ಓದಿ