ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಬ್ಯಾಡ್ಮಿಂಟನ್‌ನಲ್ಲೂ ಮಿಂಚಿದ ಧೋನಿ

ಶನಿವಾರ, 20 ಸೆಪ್ಟಂಬರ್ 2014 (11:54 IST)
ಟೀಂ ಇಂಡಿಯಾ ನಾಯಕ ಧೋನಿ ಕೇವಲ ಕ್ರಿಕೆಟ್‌ನಲ್ಲಿ ಮಾತ್ರ ಶಾಟ್‌ಗಳನ್ನು ಹೊಡೆಯಲ್ಲ. ಬ್ಯಾಡ್ಮಿಂಟನ್‌ನಲ್ಲೂ ಶಾಟ್‌ಗಳನ್ನು ಹೊಡೀತಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಂದು ಗಂಟೆ ಕಾಲ ಆಟವಾಡಿದ ಧೋನಿ ತಮ್ಮ ಬ್ಯಾಡ್ಮಿಂಟನ್ ಕೈಚಳಕವನ್ನು ಪ್ರದರ್ಶಿಸಿದರು. ಆಕರ್ಷಕ ಬ್ಯಾಕ್‌ಷಾಟ್‌ಗಳಿಂದ, ಹೆಲಿಕಾಫ್ಟರ್ ಶಾಟ್‌ಗಳಿಂದ ಧೋನಿ ಮಿಂಚಿದರು.ಕ್ರಿಕೆಟ್‌ನಷ್ಟೇ ಕೂಲ್ ಆಗಿ ಬ್ಯಾಡ್ಮಿಂಟನ್  ಆಡಿ ಸೈ ಎನಿಸಿಕೊಂಡರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಳಿದೆಲ್ಲಾ  ಆಟಗಾರರು ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದರೆ ಧೋನಿ ಬ್ಯಾಡ್ಮಿಂಟನ್‌ನಲ್ಲಿ ಕಮಾಲ್  ಮಾಡಿದರು. ಧೋನಿ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಎದುರಾಳಿಗಳ ವಿರುದ್ಧ ಜಯಗಳಿಸಿದರು.

ಒಂದು ವಿಶೇಷವೇನೆಂದರೆ ಧೋನಿ ಕ್ರಿಕೆಟ್ ನೋಡಿದ್ದ ಜನರು ಧೋನಿಯ ಬ್ಯಾಡ್ಮಿಂಟನ್ ಕೈಚಳಕ ನೋಡಿ ಅವಾಕ್ಕಾದರು.  
 
ಸೆ.22ರ ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಸಿಎಸ್‌ಕೆ ದಕ್ಷಿಣ ಆಫ್ರಿಕಾದ ಡಾಲ್ಫಿನ್ಸ್ ತಂಡವನ್ನು ಎರಡನೇ ಸಿಎಲ್‌ಟಿ20 ಲೀಗ್ ಪಂದ್ಯದಲ್ಲಿ ಎದುರಿಸಲಿದೆ. 

ವೆಬ್ದುನಿಯಾವನ್ನು ಓದಿ