ಜಿಮ್ನಾಸ್ಟಿಕ್: ಒಲಿಂಪಿಕ್ಸ್‌ಗೆ ಪ್ರವೇಶ ಪಡೆದ ದೇಶದ ಹೆಮ್ಮೆಯ ಪುತ್ರಿ ದೀಪಾ ಕುರ್ಮಾಕರ್

ಸೋಮವಾರ, 18 ಏಪ್ರಿಲ್ 2016 (18:57 IST)
ರಿಯೊ ಡಿ ಜನೈರೊ: ಭಾರತದ ಜಿಮ್ನಾಸ್ಟಿಕ್ ಸ್ಪರ್ಧಿ ದೀಪಾ ಕುರ್ಮಾಕರ್ ಅವರು ರಿಯೊ ಒಲಿಂಪಿಕ್ಸ್‌‌ನ ಮಹಿಳಾ ವಿಭಾಗಕ್ಕೆ ಅರ್ಹತೆ ಪಡೆದಿದ್ದಾರೆ.
ರಿಯೊ ಒಲಿಂಪಿಕ್ಸ್‌‌ನ ಮಹಿಳಾ ವಿಭಾಗಕ್ಕೆ ಅರ್ಹತೆ ಪಡೆಯುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವ ಭಾರತದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಭಾರತದ ಮಹಿಳಾ ಜಿಮ್ನಾಸ್ಟಿಕ್‌ ವಿಭಾಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
 
ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲಿ 22 ವರ್ಷದ ದೀಪಾ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ ವಿಭಾಗದಲ್ಲಿ ಒಟ್ಟು 52.698 ಪಾಯಿಂಟ್‌ಗಳನ್ನು ಗಳಿಸಿ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವ ಭಾರತದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 
52 ವರ್ಷಗಳ ನಂತರ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ ವಿಭಾಗದಲ್ಲಿ ಆಯ್ಕೆಯಾದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ದೀಪಾ ಪಾತ್ರರಾಗಿದ್ದಾರೆ.
 
ಭಾರತ ದೇಶಕ್ಕೆ ಸ್ವತಂತ್ರ್ಯ ಬಂದ ನಂತರ ದೇಶದ ಒಟ್ಟು 11 ಪುರುಷ ಜಿಮ್ನಾಸ್ಟ್‌ಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. 1952 ರಲ್ಲಿ ಇಬ್ಬರು, 1956 ರಲ್ಲಿ ಮೂವರು ಮತ್ತು 1964 ರಲ್ಲಿ ಆರು ಜನ ಸ್ಪರ್ಧಿಸಿದ್ದರು. ಆದರೆ ಈವರೆಗೂ ಭಾರತದ ಯಾವುದೇ ಮಹಿಳಾ ಸ್ಪರ್ಧಿಸಿಲ್ಲ.  
 
ದೀಪಾ ಕುರ್ಮಾಕರ್ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆದಿರುವ ಕುರಿತು ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ ಫೆಡರೇಷನ್ ಖಚಿತ ಪಡಿಸಿದೆ.
 
ವೈಯಕ್ತಿಕ ಅರ್ಹತಾ ಟೂರ್ನಿಯ ಮಹಿಳಾ ಆರ್ಟಿಸ್ಟಿಕ್ ಜಿಮ್ಯಾಸ್ಟ್ ಪಟ್ಟಿಯಲ್ಲಿ ದೀಪಾ ಅವರು 79ನೇ ಸ್ಥಾನ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ