ರಿಯೋ ಒಲಿಂಪಿಕ್ಸ್‌ ಸಾಧನೆ: ದೀಪಾ ಕರ್ಮಾಕರ್‌ಗೆ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು

ಬುಧವಾರ, 17 ಆಗಸ್ಟ್ 2016 (15:00 IST)
ರಿಯೋ ಒಲಿಂಪಿಕ್ಸ್ 2016 ಪಂದ್ಯಾವಳಿಯ ಜಿಮ್ನಾಸ್ಟಿಕ್ ವಿಭಾಗದಲ್ಲಿ ಫೈನಲ್ ತಲುಪಿ ಅತ್ಯುತ್ತಮ ಸಾಧನೆ ತೋರಿದ್ದರಿಂದ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್‌ಗೆ ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಖೇಲ್ ರತ್ನ ಪಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ  
 
ರಿಯೋ ಒಲಿಂಪಿಕ್ಸ್ 2016 ಪಂದ್ಯಾವಳಿಯ ಜಿಮ್ನಾಸ್ಟಿಕ್ ವಿಭಾಗದಲ್ಲಿ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರೂ 23 ವರ್ಷದ ತ್ರಿಪುರಾ ಮೂಲದ ಹೆಮ್ಮೆಯ ಕುವರಿಯ ಸಾಧನೆಗೆ ದೇಶವೇ ಹೆಮ್ಮೆಪಟ್ಟಿದೆ.
 
ವರದಿಗಳ ಪ್ರಕಾರ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರೀಯ ಕ್ರೀಡಾ ದಿನದಂದು ದೀಪಾ ಕರ್ಮಾಕರ್ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎನ್ನಲಾಗಿದೆ.  
 
ಜಿಮ್ನಾಸ್ಟಿಕ್ ಪೈನಲ್ ಸ್ಪರ್ಧೆಯಲ್ಲಿ ಟಿಸುಕುಹಾರಾ ಮೊದಲನೇ ಸ್ಥಾನ ಪಡೆದರೆ, ಪ್ರುಡುನೊವಾ ಎರಡನೇ ಸ್ಥಾನ ಪಡೆದರು. ಸ್ವಿಟ್ಜರ್‌ವೆಂಡ್‌ನ ಗಿವುಲಿಯಾ ಸ್ಟೇಂಗ್‌ರುಬೆರ್ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ದೀಪಾ ಕರ್ಮಾಕರ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ