ದುತಿ ಚಾಂದ್ : 36 ವರ್ಷಗಳ ಬಳಿಕ ಒಲಿಂಪಿಕ್ಸ್ 100 ಮೀ.ಗೆ ಅರ್ಹತೆ

ಬುಧವಾರ, 20 ಜುಲೈ 2016 (17:23 IST)
ಸ್ಪ್ರಿಂಟರ್ ದುತಿ ಚಾಂದ್ ಒಲಿಂಪಿಕ್ಸ್ 100 ಮೀ ಓಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ. 1980ರಲ್ಲಿ ಪಿಟಿ ಉಷಾ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆದಿದ್ದರು. ಜೂನ್‌ನಲ್ಲಿ ಒಲಿಂಪಿಕ್ ಅರ್ಹತಾ ಗಡಿಯನ್ನು ಸಾಧಿಸಿದ ದುತಿ ದೇಹದಲ್ಲಿ ಅಧಿಕ ಮಟ್ಟದ ಟೆಸ್ಟೊಸ್ಟೆರೊನ್ ಕಂಡುಬಂದಿದ್ದರಿಂದ ರಾಷ್ಟ್ರೀಯ ತಂಡದಿಂದ ತೆಗೆಯಲಾಗಿತ್ತು.
 
3. ಜೀತು ರಾಯ್(ಶೂಟಿಂಗ್)
ಜೀತು ರಾಯ್ ಭಾರತದ ಪರ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಬಾಕುವಿನ ವಿಶ್ವಕಪ್‌ನಲ್ಲಿ 10 ಮೀ ಏರ್ ಪಿಸ್ಟಲ್‌ ಸ್ಪರ್ಧೆಯಲ್ಲಿ ಜೀತು ಬೆಳ್ಳಿ ಪದಕ ಗೆದ್ದಿದ್ದರು. ಅದು ಅವರು ಒಟ್ಟಾರೆ 6ನೇ ಪದಕವಾಗಿದೆ.
 
4. ಕಿದಂಬಿ ಶ್ರೀಕಾಂತ್ (ಬ್ಯಾಡ್ಮಿಂಟನ್)
ಲೆಜೆಂಡರಿ ಲಿನ್ ಡ್ಯಾನ್ ಅವರ ವಿರುದ್ಧ ಅವರದ್ದೇ ನೆಲದಲ್ಲಿ 2014ರಲ್ಲಿ ವಿಜೇತರಾದಾಗ ಜಗತ್ತು ಕಿದಂಬಿ ಶ್ರೀಕಾಂತ್ ಕಡೆ ಗಮನಹರಿಸಿತು. ಹೈದರಾಬಾದಿ ಇನ್ನೂ ಕೆಲವು ಗಮನಾರ್ಹ ಗೆಲುವು ಗಳಿಸಿದ್ದು, ಚೀನಾ ಓಪನ್ ಸೂಪರ್ ಸೀರೀಸ್ ಗೆಲುವು ಶ್ರೇಷ್ಟ ಗೆಲುವಾಗಿದೆ.
 
5. ಮಹಿಳಾ ಹಾಕಿ ತಂಡ
ಒಲಿಂಪಿಕ್‌ಗೆ ಮಹಿಳಾ ಹಾಕಿ ಚೊಚ್ಚಲ ಪ್ರವೇಶ ಮಾಡುತ್ತಿದೆ. ವಿಶ್ವ ಹಾಕಿ ಲೀಗ್ ಸೆಮಿಫೈನಲ್ಸ್‌ನಲ್ಲಿ 5ನೇ ಸ್ಥಾನ ಗಳಿಸಿರುವುದು ರಿಯೊಗೆ ಬರ್ತ್ ಬುಕ್ ಮಾಡಲು ನೆರವಾಗಿದೆ. ಆದರೆ ಅವರು ಕಠಿಣವಾದ ಗುಂಪಿನಲ್ಲಿದ್ದು, ಅರ್ಜೆಂಟೈನಾ, ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್, ಜಪಾನ್ ಮತ್ತು ಅಮೆರಿಕ ಸೇರಿವೆ. ಟಾಪ್ 2 ತಂಡಗಳು ಸೆಮೀಸ್‌ ತಲುಪುವುದರಿಂದ ಭಾರತಕ್ಕೆ ಅಗ್ನಿಪರೀಕ್ಷೆಯಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ