ಸುಲಭದ ಹಣದಿಂದ ಕೆಡುತ್ತಿರುವ ಕ್ರಿಕೆಟರುಗಳು: ಗ್ಲೆನ್ ಮೆಕ್‌ಗ್ರಾತ್

ಮಂಗಳವಾರ, 23 ಆಗಸ್ಟ್ 2016 (19:45 IST)
ಜನಪ್ರಿಯ ಟ್ವೆಂಟಿ 20 ಲೀಗ್‌ಗಳ ಮೂಲಕ ಸಿಗುವ ಸುಲಭದ ಹಣವು ವೇಗದ ಬೌಲರುಗಳನ್ನು ಕೆಡಿಸುತ್ತಿದ್ದು, ಆರಂಭಿಕ ಯಶಸ್ಸಿನ ಬಳಿಕ ಅವರು ಕಠಿಣ ಪರಿಶ್ರಮವನ್ನು ನಿಲ್ಲಿಸುತ್ತಾರೆ ಎಂದು ಆಸ್ಟ್ರೇಲಿಯಾ ವೇಗಿ ಲೆಜೆಂಡ್ ಗ್ಲೆನ್ ಮೆಕ್‌ಗ್ರಾತ್ ಅಭಿಪ್ರಾಯಪಟ್ಟರು.
 
ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ನಾನು ಕಂಡ ಸಮಸ್ಯೆ ಅವರು ಕೆಲಸ ಮಾಡಲು ಎಷ್ಟು ಕಠಿಣವಾಗಿ ಸಿದ್ದವಾಗಿದ್ದಾರೆ ಎನ್ನುವುದಾಗಿದೆ. ಅವರು ಐಪಿಎಲ್ ಅಥವಾ ಆಸ್ಟ್ರೇಲಿಯಾದ ಬಿಗ್ ಬ್ಯಾಶ್‌ನಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಪಡೆದರೆ, ತಾವು ಉತ್ಕೃಷ್ಟ ಮಟ್ಟ ಮುಟ್ಟಿರುವುದಾಗಿ ಭಾವಿಸಿ ಕಠಿಣ ತರಬೇತಿ ನಿಲ್ಲಿಸುತ್ತಾರೆ ಎಂದು ಮೆಕ್‌ಗ್ರಾತ್ ಅಂಡರ್ 23 ವೇಗಿಗಳಿಗೆ ಕೋಚಿಂಗ್ ಕ್ಲಿನಿಕ್ ಬಳಿಕ ಹೇಳಿದರು.
 
 ಯುವ ಬೌಲರುಗಳು ಕಠಿಣ ಪರಿಶ್ರಮಕ್ಕೆ ಸಿದ್ಧರಾಗಿರಬೇಕು ಮತ್ತು ಅಲ್ಲಿ ಉಳಿಯಲು ಇನ್ನಷ್ಟು ಕಠಿಣ ಪರಿಶ್ರಮ ಪಡಬೇಕು. ಇದಕ್ಕೆ ಯಾವುದೇ ಅಡ್ಡ ದಾರಿ ಅಥವಾ ಸುಲಭ ಆಯ್ಕೆಗಳಿಲ್ಲ. ಕೆಲವು ಬಾರಿ ಕ್ರಿಕೆಟರುಗಳು ನಿರ್ದಿಷ್ಟ ಮಟ್ಟವನ್ನು ಮುಟ್ಟಿದ ಬಳಿಕ ದಿಢೀರನೇ ಬಂದ ಸುಲಭ ಹಣದಿಂದ ಅವರು ಕಠಿಣ ಪರಿಶ್ರಮವನ್ನು ನಿಲ್ಲಿಸುತ್ತಾರೆ ಎಂದು ಮೆಕ್‌ಗ್ರಾತ್ ಹೇಳಿದರು. 

ವೆಬ್ದುನಿಯಾವನ್ನು ಓದಿ