ಯೂರೊ 2016: ಬೆಲ್ಜಿಯಂ ವಿರುದ್ಧ ಇಟಲಿಗೆ 2-0 ಜಯ

ಮಂಗಳವಾರ, 14 ಜೂನ್ 2016 (16:40 IST)
ಎಮಾನ್ಯುಯೆಲ್ ಗಿಯಾಚೆರೆನಿ ಮತ್ತು ಗ್ರೇಜಿಯಾನೊ ಪಿಲ್ಲೆ ಅವರ ಮಿಂಚಿನ ಗೋಲುಗಳಿಂದ ಯೂರೊ 2016ರಲ್ಲಿ ಇಟಲಿ ತಂಡವು ಬೆಲ್ಜಿಯಂ ತಂಡವನ್ನು 2-0ಯಿಂದ ಸೋಲಿಸಿದೆ.  ಮಾರ್ಕ್ ವಿಲ್ಮೋಟ್ ಬೆಲ್ಜಿಯಂ ತಂಡವು ಐರೋಪ್ಯ ಚಾಂಪಿಯನ್ ಷಿಪ್ ಫೈನಲ್ಸ್‌ನಲ್ಲಿ ಮೇಲಿನ ಕ್ರಮಾಂಕದ ತಂಡವಾಗಿದ್ದು, ಗ್ರೂಪ್ ಇ ಹೋರಾಟದಲ್ಲಿ ತುಂಬಾ ಹೊತ್ತು ಮೇಲುಗೈ ಸಾಧಿಸಿತ್ತು. ಆದರೆ ಅರ್ಧಗಂಟೆಯ ನಂತರ ಗಿಯಾಚೆರೆನಿಯ ಗೋಲು ಮತ್ತು ಪೆಲ್ಲೆಯವರ ಅಚ್ಚರಿಯ ಹೊಡೆತದಿಂದ ಇಟಲಿ ಮುನ್ನಡೆ ಸಾಧಿಸಿತು.
 
 ಆದರೆ ಈ ಗೆಲುವಿನಿಂದ ಉಬ್ಬಿಹೋಗದ ಇಟಲಿಯ ಕೋಚ್ ಕಾಂಟೆ ಏಕಮಾತ್ರ ಪಂದ್ಯದಿಂದ ಜನರ ಅಂದಾಜುಗಳನ್ನು ಬದಲಿಸಲು ಸಾಧ್ಯವಿಲ್ಲ. ಕಳೆದ ವಿಶ್ವಕಪ್‌ನಲ್ಲಿ ಉಂಟಾದ ಗಾಯ ಇನ್ನೂ ಮಾಗಿಲ್ಲ. ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ ನಾವು  ಗ್ರೂಪ್ ಹಂತದಲ್ಲಿ ನಿರ್ಗಮಿಸಿದೆವು ಎಂದು ಹೇಳಿದ್ದಾರೆ.

ಎರಡು ವರ್ಷಗಳ ಹಿಂದಿನ ಗಾಯ ಇನ್ನೂ ಉರಿಯುತ್ತಿದೆ. ಇಲ್ಲಿ ಅಲೆಗಳನ್ನು ಸೃಷ್ಟಿಸಲು ನಾವು ಅಸಾಮಾನ್ಯ ಸಾಧನೆ ಮಾಡಬೇಕು ಎಂದು ಮ್ಯಾನೇಜರ್ ಹೇಳಿದರು. ಐರ್ಲೆಂಡ್ ಜತೆ ಸ್ವೀಡನ್ 1-1 ಡ್ರಾನಿಂದ ಇಟಲಿ ಗ್ರೂಪ್‌ನ ಮೇಲಿನ ಸ್ಥಾನಕ್ಕೆ ಜಿಗಿದಿದೆ.

 ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ