ಫಿಫಾ ವಿಶ್ವಕಪ್‌‌: ಜಪಾನ್ ವಿರುದ್ಧ ಕೊಲಂಬಿಯಾಗೆ ಭರ್ಜರಿ ಗೆಲುವು

ಬುಧವಾರ, 25 ಜೂನ್ 2014 (15:42 IST)
ಫಿಫಾ ವಿಶ್ವ ಕಪ್‌ 2014 ಗ್ರೂಪ್‌ (ಸಿ)ಯ ಮೂರನೇ ಪಂದ್ಯ ಜಪಾನ್ ಮತ್ತು ಕೊಲಂಬಿಯಾದ ವಿರುದ್ದ ಎರಿನಾ ಪೆಂಟಾನಲ್‌ ಕ್ರೀಡಾಂಗಣ ಕುವಾಬಾದಲ್ಲಿ ನಡೆಯಿತು. ಇದರಲ್ಲಿ ಕೊಲಂಬಿಯಾ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಜಪಾನ್‌ ತಂಡವನ್ನು 4-1 ಅಂತರದಿಂದ ಸೋಲಿಸಿದೆ. 
 
ಕೊಲಂಬಿಯಾದ ಆಟಗಾರ ಜುವಾನ್‌ ಕುವಾದ್ರೊ 17ನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲನ್ನು ಗಳಿಸಿದಾಗ ಜಪಾನ್‌‌ಗಿಂತ ಕೊಲಂಬಿಯಾ 1-0 ಅಂತರದಿಂದ ಮುನ್ನಡೆ ಸಾದಿಸಿತ್ತು. ಇದರ ನಂತರ ಜಪಾನ್‌‌‌ ಆಟಗಾರ ಶಿಂಜಿ ಒಕಾಜಾಕೀ 45ನೇ ನಿಮಿಷದಲ್ಲಿ ಗೋಲನ್ನು ಗಳಿಸಿ ಸ್ಕೋರನ್ನು 1-1 ಕ್ಕೆ ಸಮನಾಗಿಸಿದರು. ಮೊದಲ ಹಾಫ್‌‌‌‌‌‌ ಸಮಯದವರೆಗೆ ಎರಡೂ ತಂಡಗಳ ಸ್ಕೋರ್‌‌ 1-1ಕ್ಕೆ ಸಮನಾಗಿತ್ತು. 
 
ಎರಡನೇ ಹಾಫ್‌‌‌‌‌ನಲ್ಲಿ ಕೊಲಂಬಿಯಾದ ಆಟಗಾರ ಜೈಕ್ಸನ್‌ ಮಾಟಿಂನೆಜ್‌‌ 55ನೇ ನಿಮಿಷದಲ್ಲಿ ಎರಡನೇ ಗೋಲನ್ನು ಗಳಿಸಿದರು. ಈ ಮೂಲಕ ತಂಡದ ಸ್ಕೋರ್‌ 2-1 ಆಯಿತು.  ನಂತರ ಜೈಕ್ಸನ್‌ ಮಾಟಿಂನೆಜ್‌ 82ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲನ್ನು ಮತ್ತು ತಂಡದ ಮೂರನೇ ಗೋಲನ್ನು ಗಳಿಸಿ ಸ್ಕೋರನ್ನು 3-1 ಮಾಡಿದರು. ಕೊಲಂಬಿಯಾದ ಜೇಮ್ಸ್‌‌ ರೋಡ್ರಿಗೆಜ್‌‌ 89ನೇ ನಿಮಿಷದಲ್ಲಿ ನಾಲ್ಕನೇ ಗೋಲನ್ನು ಗಳಿಸಿದರು. ಎರಡನೇ ಹಾಫ್‌‌ನಲ್ಲಿ ಜಪಾನ್‌ ಒಂದೂ ಗೋಲನ್ನು ಗಳಿಸದ ಕಾರಣ 1-4 ಅಂತರದಿಂದ ಸೋಲಿನ ಮುಖ ನೋಡುವಂತಾಯಿತು. 

ವೆಬ್ದುನಿಯಾವನ್ನು ಓದಿ