ಫಿಫಾ:ಕ್ರೊಯೆಶಿಯಾಗೆ ಭರ್ಜರಿ ಗೆಲುವು

ಗುರುವಾರ, 19 ಜೂನ್ 2014 (16:29 IST)
ಫಿಫಾ ವಿಶ್ವಕಪ್‌ 2014ರ ಗ್ರೂಪ್‌‌ ಎ ನ ಪಂದ್ಯದಲ್ಲಿ ಕ್ರೊಯೆಶಿಯಾದ ಆಟಗಾರರು ಉತ್ತಮ ಪ್ರದರ್ಶನ ನೀಡಿ ಕೈಮರೂನ್‌‌ ತಂಡವನ್ನು 4-0 ಅಂತರದಿಂದ ಸೋಲಿಸಿದೆ. ಈ ಗೆಲುವಿನ ಮೂಲಕ ಕ್ರೋಯೆಶಿಯಾ ಮುಂದಿನ ಸುತ್ತಿಗೆ ಹೋಗುವಂತಾಗಿದೆ. 
 
ಕೈಮರೂನ್‌ ತಂಡ ಕ್ರೊಯೆಶಿಯಾದ ವಿರುದ್ದ ಗೋಲು ಗಳಿಸಲು ಸಾಕಷ್ಟು ಪ್ರಯತ್ನ ಪಟ್ಟಿತ್ತು ಆದರೆ ಕ್ರೋಯೆಶಿಯಾ ತಂಡ ಕೈಮರೂನ್‌ ತಂಡಕ್ಕೆ ಒಂದು ಗೋಲನ್ನು ಗಳಿಸಲು ಬಿಡಲಿಲ್ಲ. 
 
ಕ್ರೊಯೆಶಿಯಾದ ಇವಿಕಾ ಓಲಿಕ್‌‌ 11ನೇ ನಿಮಿಷದಲ್ಲಿ ಮೊದಲ ಗೋಲನ್ನು ಗಳಿಸಿದರು. 48ನೇ ನಿಮಿಷದಲ್ಲಿ ಇವಾನ್‌ ಪೆರಿಸಿಸ್‌‌ ಗೋಲನ್ನು ಗಳಿಸಿ ಸ್ಕೋರ್‌ 2-0 ಮಾಡಿದರು. 61ನೇ ಮತ್ತು 73ನೇ ನಿಮಷದಲ್ಲಿ ಮರಿವೊ ಮಡ್ಣಜುಕಿ ಗೋಲನ್ನು ಗಳಿಸಿ ಗೆಲುವಿನ ಹಾದಿಯಡೆಗೆ ಸಾಗಿದರು. 
 
ಇದಕ್ಕೂ ಮೊದಲು ಕ್ರೊಯೆಶಿಯಾ ತನ್ನ ಮೊದಲ ಪಂದ್ಯದಲ್ಲಿ ಬ್ರೆಜಿಲ್‌‌ನಿಂದ ಸೋಲನ್ನು ಅನುಭವಿಸಿತ್ತು. 
ಆದರೆ ಕೈಮರೂನ್‌ ಮೆಕ್ಸಿಕೋದಿಂದ ಸೋಲನ್ನು ಅನುಭವಿಸಿತ್ತು. 

ವೆಬ್ದುನಿಯಾವನ್ನು ಓದಿ