ರಷ್ಯಾದ ನಿಷ್ಕಳಂಕ ಅಥ್ಲೀಟ್‌ಗಳಿಗೆ ಶಿಕ್ಷೆ ವಿಧಿಸದಂತೆ ಗೋರ್ಬಚೇವ್ ಮನವಿ

ಶನಿವಾರ, 23 ಜುಲೈ 2016 (17:50 IST)
ಸೋವಿಯತ್ ಮಾಜಿ ಅಧ್ಯಕ್ಷ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಮೈಕೇಲ್ ಗೋರ್ಬಚೇವ್ ನಿಷ್ಕಳಂಕ ರಷ್ಯಾದ ಅಥ್ಲೀಟ್‌ಗಳನ್ನು ನಿಷೇಧಿಸುವ ಮೂಲಕ ಶಿಕ್ಷೆ ವಿಧಿಸಬಾರದೆಂದು ಮನವಿ ಮಾಡಿದ್ದಾರೆ.
 
ಕ್ರೀಡೆಗಳಲ್ಲಿ ನಿಷೇಧಿತ ವಸ್ತುಗಳ ವಿರುದ್ಧ ಹೋರಾಟಕ್ಕೆ ನಾನು ಬೆಂಬಲಿಸುತ್ತೇನೆ. ಈ ಪಿಡುಗನ್ನು ನಿರ್ಮೂಲನೆ ಮಾಡಬೇಕಾಗಿದೆ. ಉದ್ದೀಪನ ಮದ್ದು ದುರ್ಬಳಕೆ ಸಾಬೀತಾದ ಅಥ್ಲೀಟ್‌ಗಳನ್ನು ಮಾತ್ರ ಸ್ಪರ್ಧೆಯಿಂದ ನಿಷೇಧಿಸಬೇಕು ಎಂದು ಗೊರ್ಬಚೇವ್ ಐಒಸಿ ಸದಸ್ಯರಿಗೆ ಮಾಡಿದ ಮನವಿಯಲ್ಲಿ ತಿಳಿಸಿದ್ದಾರೆ.
 
ಒಲಿಂಪಿಕ್ಸ್‌ನಿಂದ ರಷ್ಯಾ ಅಥ್ಲೀಟ್‌ಗಳನ್ನು ನಿಷೇಧಿಸಿದರೆ ಯಾವುದೇ ಆರೋಪವಿಲ್ಲದ ಸ್ವಚ್ಛ ಅಥ್ಲೀಟ್‌ಗಳನ್ನು ಕೂಡ ಶಿಕ್ಷಿಸುವ ಸಾಧ್ಯತೆಯಿಂದ ತಮಗೆ ಆತಂಕವಾಗಿದೆ ಎಂದು ಗೋರ್ಬಚೇವ್ ಹೇಳಿದ್ದಾರೆ. 
 
ಸಾಮೂಹಿಕ ಶಿಕ್ಷೆಯ ತತ್ವವು ಸ್ವೀಕಾರಾರ್ಹವಲ್ಲ. ಸಾಮಾನ್ಯ ಮಾನವೀಯ ಮೌಲ್ಯಗಳು, ಮಾನವತೆಯನ್ನು ಆಧರಿಸಿದ ಒಲಿಂಪಿಕ್ ಅಭಿಯಾನದ ಸಂಸ್ಕೃತಿಗೆ ಇದು ವಿರುದ್ಧವಾಗಿದೆ ಎಂದು ಗೋರ್ಬಚೇವ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ