ನವದೆಹಲಿ: ಕಂಚಿನ ಪದಕದೊಂದಿಗೆ ತಾಯ್ನಾಡಿಗೆ ಮರುಳುತ್ತಿರುವ ಭಾರತದ ಪುರುಷರ ಹಾಕಿ ತಂಡಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ವಿಶೇಷ ಗೌರವನ್ನು ಸಲ್ಲಿಸಲಾಯಿತು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪೇನ್‌ನನ್ನು 2-1 ಗೋಲುಗಳಿಂದ ಸೋಲಿಸಿದ ಕಂಚಿನ ಪದಕವನ್ನು ಪಡೆಯುತ್ತಿದ್ದ ಹಾಗೇ ಭಾರತದಾದ್ಯಂತ ಸಂಭ್ರಮ ಮನೆ ಮಾಡಿತು. ಇದೀಗ ತಾಯ್ನಾಡಿಗೆ ಮರಳಲು ಹಾಕಿ ಆಟಗಾರರು ಏರ್ ಇಂಡಿಯಾ ವಿಮಾನವೇರಿದ್ದಾರೆ.
ಹೆಮ್ಮೆ ತಂಡ ಭಾರತ ಹಾಕಿ ಆಟಗಾರರು ವಿಮಾನವನ್ನು ಏರುತ್ತಿದ್ದ ಹಾಗೇ ಪೈಲಟ್ ವಿಶೇಷ ಪ್ರಕಟಣೆಯೊಂದಿಗೆ ಅವರನ್ನು ಸ್ವಾಗತಿಸಿದರು. ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಕಂಚಿನ ಪದಕವನ್ನು ಮನೆಗೆ ತಂದಿದ್ದಕ್ಕಾಗಿ ಭಾರತೀಯ ಹಾಕಿ ತಂಡಕ್ಕೆ ಧನ್ಯವಾದ ಅರ್ಪಿಸಿದರು. ನೀವು ನಿಜವಾಗಿಯೂ ದೇಶಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಘೋಷಿಸಿದರು.
ಪೈಲಟ್ ಅವರು ಈ ಮಾತು ಹೇಳುತ್ತಿದ್ದ ಹಾಗೇ ವಿಮಾನದಲ್ಲಿದ್ದ ಪ್ರಯಾಣಿಕರು ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದರು. ಇದನ್ನು ನೋಡಿದ ಆಟಗಾರರು ಆಶ್ಚರ್ಯಚಕಿತರಾದರು. ಭಾರಿ ಚಪ್ಪಾಳೆಗಳ ಸುರಿಮಳೆಯಲ್ಲಿ ವಿಮಾನ ಸಿಡಿಯುತ್ತಿದ್ದಂತೆ ಆಟಗಾರರು ಹರ್ಷೋದ್ಗಾರದಲ್ಲಿ ಮುಳುಗಿದರು.
ಅವರು ಭಾರತಕ್ಕೆ ಬಂದಿಳಿದ ನಂತರ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಆಟಗಾರರನ್ನು ಅದ್ಧೂರಿ ಸ್ವಾಗತದೊಂದಿಗೆ ಸ್ವಾಗತಿಸಲಾಯಿತು.