ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಒಂದೇ ಈವೆಂಟ್ ಇದ್ದು, ಇದರೊಂದಿಗೆ ಈ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತದ ಪಂದ್ಯಗಳು ಸಮಾಪ್ತಿಯಾಗಲಿದೆ. ಆ ಎರಡು ಈವೆಂಟ್ ಗಳು ಯಾವುವೆಲ್ಲಾ ನೋಡಿ.
ಭಾರತ ಇಂದು ವನಿತೆಯರ 76 ಕೆಜಿ ವನಿತೆಯರ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ರಿತಿಕಾ ಹೂಡಾ ಭಾಗಿಯಾಗುತ್ತಿದ್ದಾರೆ. ಈ ಈವೆಂಟ್ ಇಂದು ಅಪರಾಹ್ನ 2.51 ಕ್ಕೆ ನಡೆಯಲಿದೆ. ಇದಾದ ಬಳಿಕ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತೀಯರ ಎಲ್ಲಾ ಸ್ಪರ್ಧೆಗಳೂ ಕೊನೆಯಾಗಲಿದೆ.
ಜುಲೈ 26 ರಂದು ಆರಂಭವಾದ ಪ್ಯಾರಿಸ್ ಒಲಿಂಪಿಕ್ಸ್ ಆಗಸ್ಟ್ 11 ರವರೆಗೆ ನಡೆಯಲಿದೆ. ಅಂದರೆ ನಾಳೆ ಒಲಿಂಪಿಕ್ಸ್ ಗೆ ತೆರೆ ಬೀಳಲಿದೆ. ಆದರೆ ಭಾರತದ ಪಂದ್ಯಗಳು ಇಂದಿಗೇ ಮುಕ್ತಾಯವಾಗಲಿದೆ. ನಿನ್ನೆ ಪುರುಷರ 57 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಅಮನ್ ಸೆಹ್ರಾವತ್ ಕಂಚಿನ ಪದಕ ಗೆದ್ದಿದ್ದರು.
ಇದರೊಂದಿಗೆ ಭಾರತ ಈ ಒಲಿಂಪಿಕ್ಸ್ ನಲ್ಲಿ ಐದು ಕಂಚು ಮತ್ತು ಒಂದು ಬೆಳ್ಳಿ ಸೇರಿದಂತೆ ಆರು ಪದಕ ಗೆದ್ದುಕೊಂಡಂತಾಗಿದೆ. ಇಂದು ರಿತಿಕಾ ಪದಕ ಗೆದ್ದರೆ ಈ ಸಂಖ್ಯೆ ಹೆಚ್ಚಾಗಬಹುದು. ಜೊತೆಗೆ ವಿನೇಶ್ ಫೋಗಟ್ ಪ್ರಕರಣದಲ್ಲಿ ಕ್ರೀಡಾ ಪ್ರಾಧಿಕಾರದ ಕಟಕಟೆಯಲ್ಲಿದ್ದು, ಆಕೆಗೆ ಬೆಳ್ಳಿ ಪದಕ ನೀಡಲು ಪ್ರಾಧಿಕಾರ ಒಪ್ಪಿಕೊಂಡರೆ ಭಾರತದ ಪದಕದ ಸಂಖ್ಯೆ 8 ಕ್ಕೇರಲಿದೆ.