ಈ ಮಹಿಳಾ ಬಾಕ್ಸರ್ ಕೊಟ್ಟ ಪಂಚ್ ಹೇಗಿದೆ ಗೊತ್ತಾ?!

ಶುಕ್ರವಾರ, 13 ಜನವರಿ 2017 (09:35 IST)
ನವದೆಹಲಿ: ಮಹಿಳಾ ಬಾಕ್ಸರ್ ಗಳು ಪುರುಷರಿಗಿಂತ ಕಮ್ಮಿಯಿಲ್ಲ ಎಂದು ಈಕೆ ಮತ್ತೆ ಸಾಧಿಸಿ ತೋರಿಸಿದ್ದಾಳೆ. ಇದುವರೆಗೆ ಯಾರೂ ಭಾರತೀಯ ಮಹಿಳೆಯರು ವೃತ್ತಿಪರ ಬಾಕ್ಸಿಂಗ್ ಕಣಕ್ಕೆ ಇಳಿಯುವ ಸಾಹಸ ಮಾಡಿರಲಿಲ್ಲ. ಆದರೆ ಈಕೆ ಮಾಡಿದ್ದಾಳೆ.

ಈ ಸಾಹಸಿ ಬಾಕ್ಸರ್ ಹೆಸರು ಲೈಶ್ರಾಮ್ ಸರಿತಾ. ಈಕೆ ಮಾಜಿ ವಿಶ್ವ ಚಾಂಪಿಯನ್. ಇದೀಗ ಜನವರಿ 29 ರಂದು ಇಂಡಿಯನ್ ಬಾಕ್ಸಿಂಗ್ ಕೌನ್ಸಿಲ್ ಇಂಫಾಲ್ ನಲ್ಲಿ ನಡೆಯಲಿರುವ ವೃತ್ತಿಪರ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಹಂಗೇರಿಯಾದ ಝೋಪಿಯಾ ಬೆಡೋ ಅವರನ್ನು ಎದುರಿಸಲಿದ್ದಾರೆ. ಈ ಮೂಲಕ ವೃತ್ತಿಪರ ಬಾಕ್ಸಿಂಗ್ ಗೆ ಅಡಿಯಿಟ್ಟ ಮೊದಲ ಭಾರತೀಯ ಮಹಿಳೆ ಎನ್ನುವ ಸಾಧನೆ ಮಾಡಲಿದ್ದಾರೆ.

31 ವರ್ಷದ ಸರಿತಾ ಹಲವು ವೃತ್ತಿಪರ ಬಾಕ್ಸಿಂಗ್ ಪ್ರಶಸ್ತಿ ತನ್ನದಾಗಿಸಿಕೊಂಡಿರುವ 29 ವರ್ಷದ ಬೆಡೋ ಅವರನ್ನು ಎದುರಿಸಲಿದ್ದು, ಅಮೆರಿಕಾದ ತರಬೇತುದಾರರ ಬಳಿ ತರಬೇತಿ ಪಡೆಯುತ್ತಿದ್ದಾರೆ. “ನಾನು ಕಠಿಣ ಸ್ಪರ್ಧೆ ಒಡ್ಡುತ್ತೇನೆ. ಕಠಿಣ ತಯಾರಿ ನಡೆಸುತ್ತಿದ್ದೇನೆ. ನನ್ನ ತವರಿನಲ್ಲೇ ಆಡುತ್ತಿರುವುದು ಮತ್ತಷ್ಟು ಉತ್ಸಾಹ ನೀಡಿದೆ” ಎಂದು ಸರಿತಾ ಹೇಳಿದ್ದಾರೆ. ಹೀಗಾಗಿ ಭಾರತದ ವೀರ ವನಿತೆಯ ಹೋರಾಟವನ್ನು ನೋಡಲಿಕ್ಕೆ ಕಾದು ಕೂತಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ