ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಐತಿಹಾಸಿಕ ಸಾಧನೆ
ಇದುವರೆಗೂ ಪದಕವೇ ಗೆಲ್ಲದ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದೆ. 1968 ರಿಂದ 2016 ರವರೆಗೆ ಭಾರತ ಗೆದ್ದಿದ್ದು 12 ಪ್ಯಾರಾಲಿಂಪಿಕ್ಸ್ ಪದಕಗಳನ್ನು ಮಾತ್ರ. ಆದರೆ ಈ ಬಾರಿ ಒಂದೇ ಕೂಟದಲ್ಲಿ 19 ಪದಕ ತನ್ನದಾಗಿಸಿಕೊಂಡಿದೆ. ಇದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿದೆಯೇ? ನಮ್ಮ ಒಲಿಂಪಿಕ್ಸ್ ವೀರರ ಈ ಸಾಧನೆಗೆ ಒಂದು ಸೆಲ್ಯೂಟ್ ಹೇಳಲೇಬೇಕು.