ತಪ್ಪು ಲೆಕ್ಕಾಚಾರದಿಂದ ಮಲ್ಲೇಶ್ವರಿಗೆ ಕೈತಪ್ಪಿದ ಒಲಿಂಪಿಕ್ ಚಿನ್ನದ ಪದಕ

ಸೋಮವಾರ, 25 ಜುಲೈ 2016 (17:53 IST)
ಆಂಧ್ರಪ್ರದೇಶ ಮೂಲದ ವೇಟ್‌ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಪ್ರಥಮ ಮಹಿಳೆಯಾಗಿದ್ದಾರೆ. ಸಿಡ್ನಿಯಲ್ಲಿ 2000ದಂದು ಅವರು ಸ್ನ್ಯಾಚ್‌ನಲ್ಲಿ 110 ಕೆಜಿ ಭಾರ ಎತ್ತಿದರು ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 130 ಕೆಜಿ ಭಾರವನ್ನು ಎತ್ತುವ ಮೂಲಕ ಒಟ್ಟು 240 ಕೆಜಿ ತೂಕವನ್ನು ಎತ್ತಿದ್ದಾರೆ.
 
ಇದಾದ ಬಳಿಕ ಮಲ್ಲೇಶ್ವರಿ ಚಿನ್ನದ ಪದಕ ಮಿಸ್ ಆಗಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದರು. ಇಂದಿಗೂ ಕೂಡ ಚಿನ್ನದ ಪದಕ ತಮ್ಮ ಕೈತಪ್ಪಿಹೋಯಿತೆಂದೇ ಅವರು ಭಾವಿಸಿದ್ದಾರೆ. ಅವರ ಪ್ರಕಾರ, ಚಿನ್ನದ ಪದಕದ ಸ್ಪರ್ಧೆಯಲ್ಲಿ  ಮಲ್ಲೇಶ್ವರಿ ಕೋಚ್‌ಗಳು ಅವರಿಗೆ   137. 5 ಕೆಜಿ ಭಾರವನ್ನು ಎತ್ತಲು ಕೊಟ್ಟಿದ್ದು ತಪ್ಪು ಲೆಕ್ಕಾಚಾರ ಎಂದು ಭಾವಿಸಿದ್ದಾರೆ.
 
ತಾವು 132.5 ಕೆಜಿ ತೂಕವನ್ನು ಎತ್ತಿದ್ದರೂ ಚಿನ್ನ ಗೆಲ್ಲುತ್ತಿದ್ದೆ ಎಂದು ಮಲ್ಲೇಶ್ವರಿ ಹತಾಶೆಯಿಂದ ಹೇಳಿದ್ದಾರೆ. ನಾನು 137.5 ಕೆಜಿ ತೂಕ ಎತ್ತುವುದನ್ನು ಕೂಡ ಅಭ್ಯಾಸ ಮಾಡಿದ್ದೆ. ಆದರೆ ದುರದೃಷ್ಟವಶಾತ್ ಆ ದಿನ ಅದನ್ನು ಸಾಧಿಸಲಾಗಲಿಲ್ಲ ಎಂದು ಮಲ್ಲೇಶ್ವರಿ ಹೇಳಿದರು
 
 1994ರಲ್ಲಿ ಇಸ್ತಾನ್‌ಬುಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‍‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. 1995ರಲ್ಲಿ ಕೊರಿಯಾದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ  54 ಕೆಜಿ ವಿಭಾಗದಲ್ಲಿ ಗೆಲುವು ಗಳಿಸಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ