2036 ಅಥವಾ 2040 ಕ್ಕೆ ಭಾರತದಲ್ಲೇ ಒಲಿಂಪಿಕ್ಸ್?!

ಬುಧವಾರ, 25 ಆಗಸ್ಟ್ 2021 (10:11 IST)
ನವದೆಹಲಿ: ಭಾರತ ಕಾಮನ್ ವೆಲ್ತ್ ಗೇಮ್ಸ್ ಗೂ ಆತಿಥ್ಯ ವಹಿಸಿದೆ. ಆದರೆ ಒಲಿಂಪಿಕ್ಸ್ ಆಯೋಜಿಸುವುದು ಕನಸಾಗಿಯೇ ಉಳಿದಿದೆ. ಆದರೆ ಈಗ ಸರ್ಕಾರ ಆ ನಿಟ್ಟಿನಲ್ಲಿಯೂ ಹೆಜ್ಜೆ ಹಾಕುತ್ತಿದೆ.


ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮುಖ್ಯಸ್ಥ ಥಾಮಸ್ ಬಾಕ್ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. 2032 ರ ಒಲಿಂಪಿಕ್ಸ್ ಆಸ್ಟ್ರೇಲಿಯಾದಲ್ಲಿ ನಡೆಯುವುದು ಪಕ್ಕಾ ಆಗಿದೆ.

ಆದರೆ 2036 ಮತ್ತು 2040 ನೇ ಒಲಿಂಪಿಕ್ಸ್ ಆತಿಥ್ಯ ವಹಿಸಲು  ಹಲವು ರಾಷ್ಟ್ರಗಳು ಪೈಪೋಟಿಯಲ್ಲಿವೆ. ಈ ಪೈಕಿ ಭಾರತವೂ ಸ್ಪರ್ಧೆಯಲ್ಲಿದೆ. ಭಾರತವೂ 2036 ಅಥವಾ 2040 ನೇ ಒಲಿಂಪಿಕ್ ಆಯೋಜಿಸಲು ಆಸಕ್ತಿ ತೋರಿಸಿದೆ. ಭಾರತದ ಜೊತೆಗೆ ಕತಾರ್, ಇಂಡೋನೇಷ್ಯಾ, ಜರ್ಮನಿ ದೇಶಗಳೂ ಸ್ಪರ್ಧೆಯಲ್ಲಿವೆ ಎಂದಿದ್ದಾರೆ. ಹೀಗಾಗಿ ಮುಂದೊಂದು ದಿನ ಭಾರತದಲ್ಲೂ ಒಲಿಂಪಿಕ್ ನಡೆಯುವುದು ಖಚಿತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ