ಹಾಕಿ: ಭಾರತಕ್ಕೆ ಅಗ್ರಸ್ಥಾನ

ಗುರುವಾರ, 27 ಅಕ್ಟೋಬರ್ 2016 (09:36 IST)
ಮಲೇಷ್ಯಾ: ಇಲ್ಲಿ ನಡೆಯುತ್ತಿರುವ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಮಲೇಷ್ಯಾ ವಿರುದ್ಧ ಗೆದ್ದು ಅಗ್ರ ಸ್ಥಾನ ಕಾಯ್ದುಕೊಂಡಿದೆ.

ಮಲೇಷ್ಯಾವನ್ನು 2-1 ರಿಂದ ಸೋಲಿಸಿದ ಭಾರತ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿತು. ಭಾರತದ ಪರ ಈ ಪಂದ್ಯದಲ್ಲಿ ರೂಪಿಂದರ್ ಪಾಲ್ ಸಿಂಗ್ 2 ಗೋಲು ಭಾರಿಸಿದರು. ಈ ಪಂದ್ಯದಲ್ಲಿ ಭಾರತಕ್ಕೆ ಸುಲಭವಾಗಿ ಜಯ ಸಿಗಲಿಲ್ಲ. ಮಲೇಷ್ಯಾ ಕೂಡಾ ತಕ್ಕ ಹೋರಾಟ ನಡೆಸಿತು.

ಮೊದಲ ಅವಧಿ ಮುಗಿದಾಗ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಆದರೆ ಕೊನೆಯ ಕ್ಷಣದಲ್ಲಿ ರೂಪಿಂದರ್ ಭಾರಿಸಿದ ಎರಡನೇ ಗೋಲಿನಿಂದಾಗಿ ಭಾರತ ಜಯ ಗಳಿಸಿತು. ಸೆಮಿಫೈನಲ್ ನಲ್ಲಿ ಭಾರತದ ಎದುರಾಳಿ ಯಾರು ಎಂಬುದು ಇಂದು ನಡೆಯಲಿರುವ ಉಳಿದ ಪಂದ್ಯಗಳಿಂದ ನಿರ್ಧಾರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ