ನಂತರದ ಶೂಟ್ಔಟ್ನಲ್ಲಿ ಅಕ್ಷದೀಪ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಬೀರೇಂದ್ರ ಲಕ್ರಾ ಮತ್ತು ಧರ್ಮವೀರ್ ಸಿಂಗ್ ಭಾರತದ ಪರ ಗೋಲು ಹೊಡೆದರೆ, ಮನಪ್ರೀತ್ ಸಿಂಗ್ ಗೋಲು ಬಾರಿಸುವಲ್ಲಿ ವಿಫಲರಾದರು. ಆದರೆ ಭಾರತದ ಗೋಲಿ ಮತ್ತು ಉಪನಾಯಕ ಸ್ರೀಜೇಶ್ ಪಾಕಿಸ್ತಾನದ ಅಬ್ದುಲ್ ಹಸೀಮ್ ಖಾನ್ ಮತ್ತು ಮಹಮ್ಮದ್ ಉಮರ್ ಬಟ್ಟಾ ಹೊಡೆದ ಶೂಟ್ಔಟ್ಗಳನ್ನು ಮೈನವಿರೇಳಿಸುವಂತೆ ರಕ್ಷಣೆ ಮಾಡಿದ್ದರಿಂದ 4-2 ಗೋಲುಗಳ ಅಂತರದಿಂದ ಭಾರತ ಜಯಗಳಿಸಿದೆ.