ಜ್ಯೂನಿಯರ್ ಹಾಕಿ ವಿಶ್ವಕಪ್ ನಲ್ಲಿ ಭಾರತಕ್ಕೆ ಭರ್ಜರಿ ಜಯ

ಶುಕ್ರವಾರ, 9 ಡಿಸೆಂಬರ್ 2016 (08:42 IST)
ಲಕ್ನೋ: ಇಲ್ಲಿ ನಡೆಯುತ್ತಿರುವ ಜ್ಯೂನಿಯರ್ ಹಾಕಿ ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಭಾರತ ಕೆನಡಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಕೆನಡಾವನ್ನು 4-0  ಅಂತರದಿಂದ ಅತಿಥೇಯ ತಂಡ ಸೋಲಿಸಿತು.

ತವರಿನ ಪ್ರೇಕ್ಷಕರ ಎದುರು ವಿಜೃಂಭಿಸಿದ ಭಾರತೀಯ ಆಟಗಾರರು ಎದುರಾಳಿಗ ಯಾವುದೇ ಹಂತದಲ್ಲೂ ಮೇಲೇಳಲು ಅವಕಾಶವೇ ನೀಡಲಿಲ್ಲ. ಮಂದೀಪ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ವರುಣ್ ಕುಮಾರ್, ಅಜಿತ್ ಪಾಂಡೆ ಭಾರತದ ಪರ ಗೋಲು ಗಳಿಸಿದವರು.

ಭಾರತಕ್ಕೆ ಮುಂದಿನ ಪಂದ್ಯ ಇಂಗ್ಲೆಂಡ್ ವಿರುದ್ಧ ನಾಳೆ ನಡೆಯಲಿದೆ. ಈ ಕೂಟದಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ