ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ಬಾಕುಗೆ ತೆರಳಿದ ಭಾರತದ ಬಾಕ್ಸರ್‌ಗಳು

ಸೋಮವಾರ, 13 ಜೂನ್ 2016 (19:37 IST)
ಬಹುತೇಕ ಮಂದಿ ಬಾಕ್ಸರುಗಳಿಗೆ ಒಲಿಂಪಿಕ್ ಬರ್ತ್‌ಗೆ ಅಂತಿಮ ಅವಕಾಶವಾಗಿದ್ದು,  9 ಸದಸ್ಯರ ಬಲಿಷ್ಠ ಭಾರತ ಬಾಕ್ಸಿಂಗ್ ತಂಡವು ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಬಾಕ್ಸರ್ ವಿಕಾಸ್ ಕೃಷ್ಣನ್ ಮತ್ತು ಕಾಮನ್ ವೆಲ್ತ್ ಬೆಳ್ಳಿಪದಕ ವಿಜೇತ ದೇವೇಂದ್ರೊ ಸಿಂಗ್ ಜತೆ ಅಜರ್‌ಬೈಜಾನ್‌ನ ಬಾಕುಗೆ ಭಾನುವಾರ ತೆರಳಿದೆ. ಬಾಕುವಿನಲ್ಲಿ ಅವರು ಎಐಬಿಎ ವಿಶ್ವ ಒಲಿಂಪಿಕ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಜೂನ್ 16ರಂದು ಆಡಲಿದ್ದಾರೆ. 
 
 ಒಬ್ಬರು ಭಾರತೀಯ ಬಾಕ್ಸರ್ ಶಿವ ತಾಪಾ( 56 ಕೆಜಿ) ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದಿದ್ದು, ವಿಕಾಸ್ (75 ಕೆಜಿ) ವಿಭಾಗದಲ್ಲಿ ಎಐಬಿಎ ಪ್ರೊ ಬಾಕ್ಸಿಂಗ್‌ನಲ್ಲಿ ಜಯಿಸುವ ಮೂಲಕ ಫೈನಲ್ ಒಲಿಂಪಿಕ್ ಅರ್ಹತಾ ಸುತ್ತಿಗೆ ಪ್ರವೇಶಿಸಿದ್ದಾರೆ. ಉಳಿದವರಿಗೆ ಅಜರ್‌ಬೈಜಾನ್ ಪಂದ್ಯಾವಳಿಯು ಕೊನೆಯ ಅವಕಾಶವಾಗಿದೆ. 
 
 ಬಾಕುವಿನಲ್ಲಿ ನಡೆಯುವ ಹೋರಾಟದಲ್ಲಿ 39 ಅರ್ಹತಾ ಸುತ್ತಿನ ಸ್ಥಾನಗಳಿದ್ದು, 49 ಕೆಜಿ ಮತ್ತು 52 ಕೆಜಿ ವಿಭಾಗದಲ್ಲಿ 2 ಸ್ಥಾನಗಳು, 56 ಕೆಜಿ, 60 ಕೆಜಿ, 64 ಕೆಜಿ, 69 ಕೆಜಿ, 75 ಕೆಜಿ ಮತ್ತು 81 ಕೆಜಿ ವಿಭಾಗದಲ್ಲಿ ತಲಾ 5 ಸ್ಥಾನಗಳು ಮತ್ತು 91 ಕೆಜಿ ಮತ್ತು +91 ಕೆಜಿಯಲ್ಲಿ ತಲಾ ಒಂದು ಸ್ಥಾನಗಳಿವೆ.  ಶಿವಾ ತಾಪಾ ಈಗಾಗಲೇ 56 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆದಿದ್ದು, ಈ ವಿಭಾಗದಲ್ಲಿ ಯಾವುದೇ ಬಾಕ್ಸರನ್ನು ಭಾರತ ಆಡಿಸುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ