ಹಾಕಿ ವಿಶ್ವಕಪ್ ನಲ್ಲಿ ಭಾರತವೇ ಫೇವರಿಟ್

ಸೋಮವಾರ, 5 ಡಿಸೆಂಬರ್ 2016 (12:39 IST)
ಲಕ್ನೋ: ಡಿಸೆಂಬರ್ 8 ರಿಂದ ಪ್ರಾರಂಭವಾಗುವ ಜ್ಯೂನಿಯರ್ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತವೇ ಫೇವರಿಟ್ ತಂಡ ಎಂದು ಜರ್ಮನಿ ತಂಡದ ಕೋಚ್ ವ್ಯಾಲೆಂಟಿನ್ ಅಟೆನ್ ಬರ್ಗ್ ಅಭಿಪ್ರಾಯಪಟ್ಟಿದ್ದಾರೆ.

“ಈ ವಿಶ್ವಕಪ್ ನಲ್ಲಿ ಭಾರತವೇ ಗೆಲ್ಲುವ ಮೆಚ್ಚಿನ ತಂಡ. ಅವರು ಕಳೆದ ಎರಡು ವರ್ಷಗಳಿಂದಲೂ ಕಠಿಣ ಪರಿಶ್ರಮಪಡುತ್ತಿದ್ದಾರೆ. ಪ್ರತಿಯೊಬ್ಬ ಆಟಗಾರನೂ ವೈಯಕ್ತಿಕವಾಗಿ ಅವರು ಪ್ರಬಲರಾಗಿದ್ದಾರೆ. ಯಾವುದೇ ತಂಡ ಕಪ್ ಗೆಲ್ಲಬೇಕಾದರೂ ಭಾರತ ತಂಡವನ್ನು ಸೋಲಿಸಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೂಟದಲ್ಲಿ ಜರ್ಮನಿ ಕೂಡಾ ಪ್ರಬಲ ತಂಡವಾಗಿದೆ. ಇದೇ ವರ್ಷ ನಡೆದ ಸ್ಪೈನ್ ನಲ್ಲಿ ನಾಲ್ಕು ರಾಷ್ಟ್ರಗಳ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜರ್ಮನಿ ಎದುರು ಭಾರತ ಸೋತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ