ಒಲಿಂಪಿಕ್ಸ್:ಕೇಂದ್ರ ಸರ್ಕಾರದ ‘ಟಾಪ್’ ಯೋಜನೆಯಿಂದ ಪದಕ ಹೆಚ್ಚಳವಾಗುತ್ತಾ?

ಶನಿವಾರ, 24 ಜುಲೈ 2021 (12:53 IST)
ನವದೆಹಲಿ: ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯರು ಕಳೆದ ಬಾರಿಗಿಂತ ಹೆಚ್ಚು ಪದಕ ಗೆಲ್ಲಬಹುದು ಎಂಬ ವಿಶ್ವಾಸವಿದೆ. ಅದಕ್ಕೆ ಕಾರಣವೂ ಇದೆ.


ಕೇಂದ್ರ ಸರ್ಕಾರ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಪ್ರಮಾಣ ಹೆಚ್ಚಿಸಲು 2014 ರಿಂದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಮ್ (ಟಾಪ್) ಎಂಬ ಹೊಸ ಯೋಜನೆ ಆರಂಭಿಸಿದೆ.

ಈ ಯೋಜನೆಯಡಿಯಲ್ಲಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಕ್ರೀಡಾಳುಗಳಿಗೆ ವಿವಿಧ ರೀತಿಯ ನೆರವು ನೀಡುವುದು, ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿದೆ. ಇದು ಅಥ್ಲೆಟ್ ಗಳ ಪಾಲಿಗೆ ಆಶಾದಾಯಕ ವಾತಾವರಣ ಸೃಷ್ಟಿಸಿದೆ. ಹೀಗಾಗಿ ಇದರ ಪರಿಣಾಮ ಪದಕ ಗೆಲ್ಲುವುದರಲ್ಲೂ ಕಾಣಬಹುದು ಎಂಬ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ