ಟೋಕಿಯೋ ಒಲಿಂಪಿಕ್ಸ್: ಗೆಲುವಿನ ಶುಭಾರಂಭ ಮಾಡಿದ ಭಾರತ ಪುರುಷರ ಹಾಕಿ ಟೀಂ

ಶನಿವಾರ, 24 ಜುಲೈ 2021 (08:51 IST)
ಟೋಕಿಯೋ: ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತದ ಪುರುಷರ ಹಾಕಿ ತಂಡ ಮೊದಲ ಗ್ರೂಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ.


ಇದೀಗ ತಾನೇ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 3-2 ಅಂತರದ ಗೆಲುವು ಸಂಪಾದಿಸಿದೆ. ಭಾರತದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನ್ಯೂಜಿಲೆಂಡ್ ಗೆ 9 ಪೆನಾಲ್ಟಿ ಕಾರ್ನರ್ ಸಿಕ್ಕಿತ್ತು.

ಭಾರತೀಯ ನಾಯಕ ಮನ್ ಪ್ರೀತ್ ಸಿಂಗ್ ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್ ಸಂಪಾದಿಸಿಕೊಟ್ಟರು. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಗೋಲು ಬಾರಿಸಿದ ಮೊದಲ ಆಟಗಾರ ಎಂಬ ಗೌರವ ರೂಪಿಂದರ್ ಪಾಲ್ ಪಾಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ