ಸ್ಕ್ವಾಷ್ ಫೈನಲ್ ಪ್ರವೇಶಿಸಿದ ಜೋಷ್ನಾ ಚಿನ್ನಪ್ಪ

ಶನಿವಾರ, 28 ಮೇ 2016 (17:04 IST)
ಭಾರತದ ಪ್ರಮುಖ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿನ್ನಪ್ಪ ಹಾಲಿ ಚಾಂಪಿಯನ್ ಆನ್ನಿ ಆವು ವಿರುದ್ಧ ತೀವ್ರ ಸೆಣಸಾಟದಲ್ಲಿ ಜಯಗಳಿಸುವ ಮೂಲಕ ಹಾಂಕಾಂಗ್‌‌ನಲ್ಲಿ ಪಿಎಸ್‌ಎ ಎಚ್‌ಕೆಎಫ್‌ಸಿ ಅಂತಾರಾಷ್ಟ್ರೀಯ ಪಂದ್ಯಾವಳಿ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. 
 
 ತಂಡದ ಸಹಆಟಗಾರ್ತಿ ದೀಪಿಕಾ ಪಾಲ್ಲಿಕಾಲ್ ನಿರ್ಗಮನದ ನಂತರ ಡ್ರಾನಲ್ಲಿ ಉಳಿದಿದ್ದ ಏಕಮಾತ್ರ ಭಾರತೀಯ ಆಟಗಾರ್ತಿ ಜೋಷ್ನಾ  ಒಂದು ಗಂಟೆ ಕಾಲದ ಸೆಮಿಫೈನಲ್‌ನಲ್ಲಿ  ಅಧಿಕ ಶ್ರೇಣಿಯ ಎದುರಾಳಿ ವಿರುದ್ಧ ನಿರ್ಣಾಯಕ ಅಂಶಗಳಲ್ಲಿ  8-11, 11-9, 12-10, 7-11, 11-9 ರಲ್ಲಿ ಗೆಲುವು ಗಳಿಸಿದರು. 
 
ತೈಪಿಯಲ್ಲಿ ನಡೆದ ಏಷ್ಯನ್ ಟೀಂ ಚಾಂಪಿಯನ್‌ಷಿಪ್‌ನಲ್ಲಿ ಕೂಡ ಜೋಷ್ನಾ ಆನ್ನಿ ಅವರಿಗಿಂತ ಉತ್ತಮ ಸಾಧನೆ ಮಾಡಿದ್ದರು.
 ಜೋಷ್ನಾ ಇದುವರೆಗೆ 11 ಪಿಎಸ್‌ಎ ಪ್ರಶಸ್ತಿಗಳಲ್ಲಿ ಗೆದ್ದಿದ್ದು, ಮೂರನೇ ಸೀಡ್ ಆಗಿರುವ ಅವರು ಶನಿವಾರ ಫೈನಲ್‌ನಲ್ಲಿ ಟಾಪ್ ಸೀಡ್ ನ್ಯೂಜಿಲೆಂಡ್ ಜೋಯೆಲ್ಲೆ ಕಿಂಗ್ ಅವರನ್ನು ಎದುರಿಸಲಿದ್ದಾರೆ. ಜೊಯೆಲ್ಲೆ ಆಸ್ಟ್ರೇಲಿಯಾದ ಡೋನ್ನಾ ಉರ್ಕುಹಾರ್ಟ್ ಅವರನ್ನು ಎದುರಿಸಿ 11-8, 10-12, 11-6 ಮತ್ತು 11-6ರಿಂದ ಜಯ ಸಂಪಾದಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ