ಟೋಕಿಯೋ ಒಲಿಂಪಿಕ್ ಹೀರೋಗಳ ಮನೆಗೆ ಉಚಿತ ಪೇಯಿಂಟ್!

ಬುಧವಾರ, 18 ಆಗಸ್ಟ್ 2021 (09:26 IST)
ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಳುಗಳ ಮನೆಗೆ ಜೆಎಸ್ ಡಬ್ಲ್ಯು ಪೇಯಿಂಟ್ ಕಂಪನಿ ಉಚಿತವಾಗಿ ಪೇಯಿಂಟ್ ಮಾಡಲು ತೀರ್ಮಾನಿಸಿದೆ.


ಈ ಬಗ್ಗೆ ಸಂಸ್ಥೆ ಹೇಳಿಕೆ ನೀಡಿದ್ದು, ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಎಲ್ಲಾ ಕ್ರೀಡಾಳುಗಳ ಮನೆಗೆ ಉಚಿತವಾಗಿ ಪೇಯಿಂಟ್ ಪೂರೈಸುವುದಾಗಿ ಹೇಳಿದೆ.

ಇನ್ನು ಸಂಸ್ಥೆಯ ಪೇಯಿಂಟ್ ಸೇವೆ ಪಡೆದುಕೊಳ್ಳಲು ಅರ್ಹ ಕ್ರೀಡಾಪಟುಗಳು ಜೆಎಸ್ ಡಬ್ಲ್ಯು ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಬೇಕಾಗುತ್ತದೆ. ಪರಿಸರ ಸ್ನೇಹಿ ಪೇಯಿಂಟ್ ಗಳ ಉತ್ಪನ್ನಕರಾದ ಜೆಎಸ್ ಡಬ್ಲ್ಯು ಈ ಮೂಲಕ ಒಲಿಂಪಿಕ್ ಹೀರೋಗಳಿಗೆ ತಕ್ಕ ಗೌರವ ನೀಡಲು ತೀರ್ಮಾನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ