ನವದೆಹಲಿ: ಕ್ರಿಕೆಟ್, ಟೆನಿಸ್, ಬ್ಯಾಡ್ಮಿಂಟನ್ ಬಿಟ್ಟರೆ ನಮ್ಮ ದೇಶದಲ್ಲಿ ಯಾವ ಕ್ರೀಡಾ ಪಟುಗಳು ಶ್ರೀಮಂತರಲ್ಲ. ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗಷ್ಟೇ ಕಿರಿಯರ ವಿಶ್ವಕಪ್ ಹಾಕಿ ಗೆದ್ದು ಸಾಧನೆ ಮಾಡಿದ ಭಾರತದ ಹುಡುಗರು ಈಗ ಉದ್ಯೋಗ ಕೇಳಲು ಮುಂದಾಗಿದ್ದಾರೆ.
ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿರುವ ಚಾಂಪಿಯನ್ ತಂಡ ತಮಗೆಲ್ಲರಿಗೂ ಉದ್ಯೋಗ ಕೊಡಿಸುವಂತೆ ಕೇಳಿಕೊಳ್ಳಲಿದ್ದಾರೆ. ಚಾಂಪಿಯನ್ ಆಗಿದ್ದಕ್ಕೆ ಪಂಜಾಬ್ ಸರ್ಕಾರ ನಮಗೆ 25 ಲಕ್ಷ ರೂ. ಬಹುಮಾನ ನೀಡಿದೆ. ಆದರೆ ಇದು ಸಾಲದು. ನಮಗೆ ಉದ್ಯೋಗ ಭದ್ರತೆ ಬೇಕು ಎಂಬುದು ಹಾಕಿ ಪಟುಗಳ ಕೋರಿಕೆ.
“ನಮಗೆ ಉದ್ಯೋಗವಿಲ್ಲ. ಒಂದು ವೇಳೆ ಗಂಭೀರ ಗಾಯಗೊಂಡರೆ ನಮ್ಮ ಖರ್ಚು ನೋಡಿಕೊಳ್ಳುವವರು ಯಾರು? ನಮಗೆ ಉದ್ಯೋಗ ಭದ್ರತೆ ಬೇಕು. ಅದಕ್ಕಾಗಿ ಡಿಸೆಂಬರ್ 28 ರಂದು ಪ್ರಧಾನಿಯವರನ್ನು ಭೇಟಿ ಮಾಡುವಾಗ ಉದ್ಯೋಗ ಕೊಡಿಸಲು ಮನವಿ ಮಾಡುತ್ತೇವೆ” ಎಂದು ಹಾಕಿ ಆಟಗಾರ ಸಮರಜಿತ್ ಸಿಂಗ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ