ಕಬಡ್ಡಿ ಆಟಗಾರರಿಗೆ ಸಿಕ್ತು ಉಡುಗೊರೆ
ನವದೆಹಲಿ: ಕೊನೆಗೂ ವಿಶ್ವಕಪ್ ಗೆದ್ದ ಕಬಡ್ಡಿ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ತಕ್ಕ ಉಡುಗೊರೆ ಕೊಟ್ಟು ಸನ್ಮಾನಿಸಿದೆ. ನವದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಎಲ್ಲಾ ಆಟಗಾರರಿಗೂ 10 ಲಕ್ಷ ರೂ. ನಗದು ನೀಡಿ ಪುರಸ್ಕರಿಸಿದೆ.
ಇತ್ತೀಚೆಗೆ ಇರಾನ್ ವಿರುದ್ಧ ಫೈನಲ್ ಗೆದ್ದು ಸತತ ಮೂರನೇ ಬಾರಿ ವಿಶ್ವಕಪ್ ಗೆದ್ದು ಸಾಧನೆ ಮಾಡಿದ ಅನೂಪ್ ಕುಮಾರ್ ನೇತೃತ್ವದ ಭಾರತೀಯ ತಂಡಕ್ಕೆ ಕ್ರೀಡಾ ಸಚಿವ ವಿಜಯ್ ಗೋಯೆಲ್ ನಗದು ಪುರಸ್ಕಾರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಬಡ್ಡಿಯನ್ನು ಒಲಿಂಪಿಕ್ಸ್ ನಲ್ಲಿ ಸೇರ್ಪಡೆಗೊಳಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನ ನಡೆಸುವುದಾಗಿ ಹೇಳಿದರು. ಇತ್ತೀಚೆಗಷ್ಟೇ ಕಬಡ್ಡಿ ವಿಶ್ವಕಪ್ ಗೆದ್ದ ಇಡೀ ತಂಡಕ್ಕೆ ಕೇವಲ 10 ಲಕ್ಷ ರೂ. ನೀಡುವುದಾಗಿ ಹೇಳಿದ್ದ ಸರ್ಕಾರ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿತ್ತು.